ಮಂಗಳೂರು:- ಇತ್ತೀಚೆಗೆ ನಡೆದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ)ಯ ಮಾಸಿಕ ಸಭೆಯಲ್ಲಿ ತೊಕ್ಕೊಟ್ಟಿನ ಹೊಸ ಬಸ್‍ಸ್ಟಾಂಡ್ ಹತ್ತಿರ ಸುಮಾರು ರೂ.8ಕೋಟಿ ವೆಚ್ಚದಲ್ಲಿ ನಿರ್ಮಿಸಲ್ಪಡುವ ಅಬ್ಬಕ್ಕ ಭವನದ ನಿರ್ಮಾಣ ಕಾರ್ಯದಲ್ಲಿ ಸರಕಾರದ ನಿರ್ಲಕ್ಷತೆ ಬಗ್ಗೆ ಖೇದವನ್ನು ಸಮಿತಿಯಲ್ಲಿ ವ್ಯಕ್ತಪಡಿಸಲಾಯಿತು ಹಾಗೂ ಈ ವಿಳಂಬಕ್ಕೆ ಜಿಲ್ಲಾಧಿಕಾರಿಯವರೇ ಕಾರಣ ಎಂದು ಆರೋಪಿಸಲಾಯಿತು.
ಸಭೆಯಲ್ಲಿ ಮಾಜಿ ಶಾಸಕರಾದ ಹಾಗೂ ಸಮಿತಿಯ ಸ್ವಾಗತಾಧ್ಯಕ್ಷರಾದ ಕೆ.ಜಯರಾಮ ಶೆಟ್ಟಿಯವರು ಮಾತನಾಡಿ ಉಳ್ಳಾಲದ ವೀರರಾಣಿ ಅಬ್ಬಕ್ಕಳ ಹೆಸರನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡುವಂತೆ ಮಂಗಳೂರಿನ ವಿಧಾನ ಸಭಾ ಶಾಸಕರು ಹಾಗೂ ಜಿಲ್ಲೆಯ ಸಂಘ ಸಂಸ್ಥೆಗಳು ಸರಕಾರಕ್ಕೆ ಒತ್ತಾಯಿಸಬೇಕೆಂದು ಕರೆ ಕೊಟ್ಟರು.
ಸಭೆಯ ಅಧ್ಯಕ್ಷತೆಯನ್ನು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷರಾದ ದಿನಕರ ಉಳ್ಳಾಲ್ ವಹಿಸಿದ್ದರು. ಗೌರವ ಉಪಾಧ್ಯಕ್ಷರುಗಳಾದ ಸದಾನಂದ ಬಂಗೇರ, ಹೈದರ್ ಪರ್ತಿಪ್ಪಾಡಿ, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಉಪಾಧ್ಯಕ್ಷರಾದ ಯು.ಪಿ.ಆಲಿಯಬ್ಬ, ಸಮಿತಿಯ ಪದಾಧಿಕಾರಿಗಳಾದ ವಾಸುದೇವ ರಾವ್, ಡಿ.ಎನ್.ರಾಘವ, ಸತೀಶ್ ಭಂಡಾರಿ, ಆಲ್ಪ್ರೆಡ್ ಡಿಸೋಜ, ಚಿದಾನಂದ ಎ, ರತ್ನಾವತಿ ಜೆ.ಬೈಕಾಡಿ, ಮಲ್ಲಿಕಾ ಎಸ್ ಭಂಡಾರಿ, ಮಾಧವಿ ಉಳ್ಳಾಲ್, ಲೀಲಾವತಿ ಎಂ.ಕಲ್ಲೂರಾಯ, ದೇವಕಿ ಯು ಬೋಳಾರ್, ಶಶಿಕಾಂತಿ ಉಳ್ಳಾಲ್, ಸುಷ್ಮಾ ಜನಾರ್ಧನ್, ರಾಜೀವಿ ಕೆಂಪು ಮಣ್ಣು, ಸೇವಂತಿ ಶ್ರೀಯಾನ್ ಮುಂತಾದವರು ಉಪಸ್ಥಿತರಿದ್ದರು.
ಕೋಶಾಧಿಕಾರಿ ಆನಂದ ಕೆ ಅಸೈಗೋಳಿ ಧನ್ಯವಾದ ಸಮರ್ಪಿಸಿದರು.