ಮಂಗಳೂರು: ನಾಟಕ ಕಲಾವಿದ, ಸಮಾಜ ಸೇವಕ  ಪೀಟರ್ ವಿಕ್ಟರ್ ಬೆನೆಡಿಕ್ಟ್ ಬೋಳಾರ್ (73) ಅವರು ಏಪ್ರಿಲ್ 18 , 2021ರಂದು ಮುಂಜಾನೆ  4.50 am ಕ್ಕೆ  ನಿಧನರಾದರು. 

70 ರ ದಶಕದ ಕಾಲದಲ್ಲಿಯೇ ರಂಗಭೂಮಿಗೆ ಬಂದ ಇವರು ತುಳು, ಕೊಂಕಣಿ ನಾಟಕಗಳಲ್ಲಿ ಚತುರ ಅಭಿನಯ ಮತ್ತು ಮುಖ ವರ್ಣಿಕೆಯ ಕಲಾವಿದರಾಗಿ ಗಮನ ಸೆಳೆದಿದ್ದರು. ದುಬೈಯಲ್ಲಿ ವೃತ್ತಿ ಯಲ್ಲಿದ್ದಾಗ ಅಲ್ಲಿಯ ನಾಟಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದರು. ಕೆ.ಎನ್.ಟೇಲರರ ನಾಟಕಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸಿದ್ದರು. ಆಗಿನ ಕಾಲದ ಕೊಂಕಣಿ ನಾಟಕಗಳಲ್ಲಿ ಪೀಟರ್  ಅಭಿನಯಿಸಿ ಖ್ಯಾತರಾಗಿದ್ದರು. ಪತ್ನಿ ಹಾಗೂ ಒಂದು ಗಂಡು, ಒಂದು ಹೆಣ್ಣು ಮಗಳನ್ನು ಆಗಲಿದ್ದಾರೆ.