ಉಡುಪಿ ಜಿಲ್ಲೆಯಲ್ಲಿ ಅತ್ಯುನ್ನತ ಸೇವೆಯನ್ನು ನೀಡಿದ 2021 ಮತ್ತು 2022 ನೇ ವಿತರಣಾ ಸಮಾರಂಭವು ದಿನಾಂಕ : 21-04-2022 ರಂದು ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ , ರಜತಾದ್ರಿ, ಮಣಿಪಾಲ, ಉಡುಪಿ, ಇಲ್ಲಿ ಮಾನ್ಯ ಉಡುಪಿ ಜಿಲ್ಲಾಧಿಕಾರಿಗಳಾದ ಕೂರ್ಮಾ ರಾವ್ ಎಂ., ಇವರ ಅಧ್ಯಕ್ಷತೆಯಲ್ಲಿ ನಡೆಯಿತು.  ಸಮಾರಂಭದಲ್ಲಿ 2021 ನೇ ಸಾಲಿನಲ್ಲಿ ಕಾರ್ಕಳ ತಾಲೂಕಿನಿಂದ ಜೋಕಿಂ ಮೈಕಲ್ ಹೆಚ್. ಪಿಂಟೊ, ವಾಣಿಜ್ಯ ತೆರಿಗೆ ಅಧಿಕಾರಿ, ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ, ಕಾರ್ಕಳ, ಇವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನೀಡಲಾಯಿತು.  

ಜೋಕಿಂ ಮೈಕಲ್ ಹೆಚ್. ಪಿಂಟೊ ಇವರು ವಾಣಿಜ್ಯ ತೆರಿಗೆÉ ಇಲಾಖೆಯಲ್ಲಿ ದಕ್ಷ, ಪ್ರಾಮಾಣಿಕ ಸೇವೆಯನ್ನು ನೀಡಿ ಜನಪ್ರಿಯರಾಗಿರುತ್ತಾರೆ.  ಇವರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಕಾರ್ಕಳ ತಾಲೂಕು ಶಾಖೆಯಲ್ಲಿ 2008-2013  ಮತ್ತು 2013-2018 ನೇ ಸಾಲಿನಲ್ಲಿ 2 ಬಾರಿ ಪೂರ್ಣಾವಧಿ ಹಾಗೂ 2019-2024 ರ ಅವಧಿಯಲ್ಲಿ ಜನವರಿ 2022 ರ ತನಕ ಅಧ್ಯಕ್ಷರಾಗಿ ಸರಕಾರಿ ನೌಕರರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದರು. ಸಂಘದ ಅಧ್ಯಕ್ಷರಾಗಿ ಸಮಾಜದ ಹತ್ತು ಹಲವು ಸಂಸ್ಥೆಗಳ ಸಹಯೋಗದಿಂದ ಸ್ವಚ್ಛತಾ ಕಾರ್ಯಕ್ರಮ, ರಕ್ತದಾನ ಶಿಬಿರ, ಮಕ್ಕಳಿಗೆ ಬೇಸಿಗೆ ಶಿಬಿರ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸಾರ್ವಜನಿಕ ಸ್ಥಳಗಳಲ್ಲಿ ವನಮಹೋತ್ಸವ, ಸಮಾಜದಲ್ಲಿರುವ ಬಡವರ ಮಕ್ಕಳಿಗೆ ಕಲಿಕೆಗಾಗಿ ಧನ ಸಹಾಯ ಮುಂತಾದ ಸಮಾಜಮುಖಿ ಯೋಜನೆಗಳನ್ನು ಕಾರ್ಯರೂಪಗೊಳಿಸಿ ಎಲ್ಲರ ಸುಖ ಕಷ್ಟಗಳಿಗೆ ಸ್ಪಂದಿಸಿ ಉತ್ತಮ ಸಂಘಟನಾ ಚಾತುರ್ಯ ಹೊಂದಿದ ಇವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿಯು ಲಭಿಸಿರುವುದು ಪ್ರಶಂಸನೀಯ.