ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ದಕ್ಷಿಣ ಕನ್ನಡ ಜಿಲ್ಲೆ ಫೆರಾರ ಊರಿನ ಜೋಯ್ಲಿನ್ ಮೆಂಡೋನ್ಸಾ ರವರಿಗೆ ಮಾರ್ಚ್ 20ರಂದು ಪೇಜಾವರ ವಲಯದ 6 ಚರ್ಚುಗಳ (ಪೇಜಾವರ, ಬಜ್ಪೆ, ಗುರುಪುರ ಕೈಕಂಬ, ಫೆರಾರ, ಪೆರ್ಮುದೆ, ಅದ್ಯಾಪಾಡಿ) ವತಿಯಿಂದ ಬಜ್ಪೆ ಯಲ್ಲಿ ಸನ್ಮಾನ ಕಾರ್ಯಕ್ರಮ ಜರುಗಿತು. ಪೇಜಾವರ ವಲಯ ಧರ್ಮಕೇಂದ್ರದ ಮುಖ್ಯಸ್ಥರಾದ ಅತಿ ವಂದನೀಯ ಮಾರ್ಸೆಲ್ ಸಲ್ಡಾನಾ ಅವರು ಅಧ್ಯಕ್ಷತೆ ವಹಿಸಿ ಸನ್ಮಾನಿಸಿದರು. ಈ ವೇಳೆ ವಲಯದ ಎಲ್ಲಾ ಧರ್ಮಗುರುಗಳು, ಭಗಿನಿಯರು ಹಾಗೂ ಪಾಲನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದು ಸನ್ಮಾನಿಸಿದರು. ಶ್ರೀಮತಿ ಪ್ರಮೀಳಾ ಪೇರಿಸ್ ಸನ್ಮಾನಿತರನ್ನು ಪರಿಚಯಿಸಿದರು ಇದೇ ಸಂದರ್ಭದಲ್ಲಿ ಸನ್ಮಾನಿತರ ತಾಯಿ ಶ್ರೀಮತಿ ಪೌಲಿನ್ ಮೆಂಡೊನ್ಸ ರವರನ್ನು ಅಭಿನಂದಿಸಲಾಯಿತು.
ರೋಮನ್ಸ್ ಲೋಬೊ ಕೈಕಂಬ ಕಾರ್ಯಕ್ರಮ ನಿರ್ವಹಿಸಿದರು.