ನ್ಯೂಜಿಲ್ಯಾಂಡ್‌ನ ಮೌಂಟ್ ಮಾಂಗನುಯಿಯಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವ ಕಪ್ ಲೀಗ್ ಪಂದ್ಯಾವಳಿಯಲ್ಲಿ ಭಾರತವು ಇಂಗ್ಲೆಂಡ್ ಎದುರು ಸೋಲುಂಡರೂ ಭಾರತದ ವೇಗದ ಬೌಲರ್ 250 ವಿಕೆಟ್‌ಗಳ ಸಾಧನೆ ಬರೆದರು. 

ಕಳೆದ ಪಂದ್ಯದಲ್ಲಿ ಅತಿ‌ ಹೆಚ್ಚು ವಿಕೆಟ್ ಕಿತ್ತ ಜೂಲನ್ ಗೋಸ್ವಾಮಿ ಈ ಪಂದ್ಯದಲ್ಲಿ ಮಹಿಳಾ ಒನ್ ಡೇ ಕ್ರಿಕೆಟ್‌ನಲ್ಲಿ 250 ವಿಕೆಟ್ ಕಿತ್ತ ಸಾಧಕರಾದರು. ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚಿನ ವಿಕೆಟ್ ಸಾಧನೆ ಈಗಾಗಲೇ ಅವರ ಹೆಸರಿನಲ್ಲಿದೆ. ಆಸ್ಟ್ರೇಲಿಯಾದ ಕ್ಯಾತರಿನ್ ಪ್ಯಾಟ್ರಿಕ್  180 ವಿಕೆಟ್‌ಗಳೊಡನೆ ಎರಡನೆಯ ಸ್ಥಾನದಲ್ಲಿ ಇದ್ದಾರೆ.