ವಿಶ್ವ ಆಯುರ್ವೇದ ದಿನಾಚರಣೆಯ ಶುಭಾವಸರದಲ್ಲಿ ನಾಟೆಕಲ್ಲಿನ ಕಣಚೂರು ಆಯುರ್ವೇದ ಆಸ್ಪತ್ರೆಯಲ್ಲಿ ಆಯರ್ವೇದ ದಿನಾಚರಣೆಯನ್ನು ವಿಶಿಷ್ಟವಾಗಿ ಸಂಸ್ಥೆಯ ಚೇರ್ಮನ್ ಡಾ ಹಾಜಿ ಕಣಚೂರು ಮೋನಜ ಅವರ ಆಶಯದಂತೆ ಯಶಸ್ವಿಯಾಗಿ ಆಚರಿಸಲಾಯಿತು.
ಸದ್ರಿ ಸಂಸ್ಥೆಯ ಪಿ.ಯು ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯುರ್ವೇದ ಮಹತ್ವ ಸಾರುವ ಚಿತ್ರಕಲಾ ಸ್ಪರ್ಧೆ ಹಾಗೂ ಆಯುರ್ವೇದ ವಿಷಯದ ಭಾಷಣ ಸ್ಪರ್ಧೆಗಳನ್ನು ಇದೇ ವೇಳೆ ನಡೆಸಲಾಯಿತು.
ಮಹಿಳಾ ಸಬಲೀಕರಣದ ಘೋಷ ವಾಕ್ಯ ಹೊಂದಿರುವ ಒಂಭತ್ತನೇ ಆಯುರ್ವೇದ ದಿನಾಚರಣೆಯ ಉದ್ಘಾಟನೆಯನ್ನು ಸಂಸ್ಥೆಯ ನಿರ್ದೇಶಕ ಅಬ್ದುಲ್ ರೆಹಮಾನ್ ದೀಪ ಬೆಳಗಿ ಉದ್ಘಾಟಿಸಿ ಆಯುರ್ವೇದ ಚಿಕಿತ್ಸೆಯ ಮಹತ್ವ ಹಾಗೂ ಕಣಚೂರು ಸಂಸ್ಥೆಯ ದೂರದರ್ಶಿತ್ವವನ್ನು ವಿವರವಾಗಿ ವಿಶ್ಲೇಷಿಸಿ ಶುಭ ಹಾರೈಸಿದರು.
ರಾಹಿಲಾರವರ ಧಾರ್ಮಿಕ ಪ್ರಾರ್ಥನೆ ಹಾಗೂ ಡಾ ಸೌಮ್ಯಾರಿಂದ ಧನ್ವಂತರೀ ಪ್ರಾರ್ಥನೆ, ವೈದ್ಯಕೀಯ ಅಧೀಕ್ಷಕ ಡಾ ಕಾರ್ತಿಕೇಯ ಪ್ರಸಾದ್ ಸ್ವಾಗತ , ವೈದ್ಯಕೀಯ ನಿರ್ದೇಶಕ ಡಾ ಸುರೇಶ ನೆಗಳಗುಳಿಯವರ ಧನ್ಯವಾದ ಸಮರ್ಪಣೆ ಮತ್ತು ಸ್ವರಚಿತ ಆಯುರ್ವೇದ ಗೀತೆ ವಾಚನದೊಂದಿಗೆ ಸಮಾರಂಭ ಕೊನೆಗೊಂಡಿತು.
ಡಾ ಮರಿಯಾ ರವರು ಹಾಗೂ ಡಾ ಸೌಮ್ಯಾರವರು ನಿರೂಪಣೆಯಲ್ಲಿ ಸಹಕರಿಸಿದ್ದರು