ಮುಂಬಯಿ: ಪ್ರತಿರ‍್ಷ ಅದ್ಧೂರಿಯಿಂದ ನೆರವೇರುತ್ತಿರುವಂತಹ ಕನ್ನಡಿಗ ಕಲಾವಿದರ ಮಾತೃ ಸಂಸ್ಥೆಯಾದ ಕನ್ನಡಿಗ ಕಲಾವಿದರ ಪರಿಷತ್ತು (ರಿ.) ಇದರ 16ನೇ ಕಲಾಮಹೋತ್ಸವವನ್ನು ತಾ.22, ಮರ‍್ಚ್ 2025 ಶನಿವಾರ ಮಧ್ಯಾಹ್ನ 1:30 ರಿಂದ ರಾತ್ರಿ 8:30ರ ವರೆಗೆ ಸಾಂತಾಕ್ರೂಜ್ ಇಲ್ಲಿನ ಬಿಲ್ಲವ ಭವನದಲ್ಲಿ ಆಚರಿಸುವುದಾಗಿ ನರ‍್ಧರಿಸಲಾಗಿದೆ. ಆ ಪ್ರಯುಕ್ತ ವಿಚಾರವಿನಿಮಯ ಮಾಡಲು ಪರಿಷತ್ತುನ ಅಧ್ಯಕ್ಷ ಡಾ| ಸುರೇಂದ್ರಕುಮಾರ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಕಳೆದ ಇತ್ತೀಚೆಗೆ ಬಿಲ್ಲವಭವನದ ಸಮಾಲೋಚನಾ ಸಭಾಗೃಹದಲ್ಲಿ ಕರ‍್ಯಕಾರಿ ಸಮಿತಿಯ ಪರ‍್ವಭಾವಿ ಸಭೆಯೊಂದನ್ನು ನಡೆಸಿ ಸಭೆಯಲ್ಲಿ ಕಲಾಮಹೋತ್ಸವದ ಬಗ್ಗೆ ರ‍್ಚಿಸಲಾಯಿತು.

ಅಧ್ಯಕ್ಷರು ಸ್ವಾಗತಿಸಿ ಸಭೆಗೆ ಚಾಲನೆ ನೀಡಿದರು. ಗೌರವ ಕರ‍್ಯರ‍್ಶಿ ಚಂದ್ರಶೇಖರ ಭಟ್ ಗತ ಸಭೆಯ ವರದಿಯನ್ನು ಮತ್ತು ಗೌರವ ಕೋಶಾಧಿಕಾರಿ ಪಿ.ಬಿ ಚಂದ್ರಹಾಸ ಅವರು ಆವಯವವನ್ನು ಸಭೆಗೆ ತಿಳಿಸಿದರು.

ಬಳಿಕ ಅಧ್ಯಕ್ಷರು ಸಭೆಯನ್ನು ಮುಂದುವರಿಸುತ್ತಾ ಕಲಾಮಹೋತ್ಸವದಂದು ಡಾ| ಆರ್.ಕೆ. ಶೆಟ್ಟಿ ಅವರ ಮಾತ್ರಶ್ರೀಯವರ ಸ್ಮರಣರ‍್ಥ ಕೊಡಮಾಡುವ ಕಲಾಶ್ರೀ ಪ್ರಶಸ್ತಿ ಪ್ರದಾನಕ್ಕೆ ಅಭ್ಯಥಿಯ ಆಯ್ಕೆಗಾಗಿ ಈಗಾಗಲೇ ಸಮಿತಿಯೊಂದನ್ನು ರಚಿಸಿದ್ದೇವೆ. ಸಮಿತಿಯು ಅಭ್ಯಥಿಯ ಆಯ್ಕೆಗಾಗಿ ಕರ‍್ಯನಿರತವಾಗಿದೆ ಮತ್ತು ಕಲಾಮಹೋತ್ಸವದಂದು ಪರಿಷ್ಕೃತಗೊಂಡ "ಮಾಹಿತಿಗ್ರಂಥ" ಕೈಪಿಡಿಯ ಬಿಡುಗಡೆಯೂ ನೆರವೇರಿಸಲಾಗುವುದು ಎಂದು ಸಭೆಗೆ ತಿಳಿಯ ಪಡಿಸಿದರು.

ಪ್ರತಿಸಲದಂತೆ ಈಬಾರಿಯೂ ಯಕ್ಷಗಾನ, ನಾಟಕ, ನೃತ್ಯ, ಸಮೂಹನೃತ್ಯ, ಸಂಗೀತ ಮುಂತಾದ ವಿವಿಧ ಕಲಾಪ್ರಕಾರಗಳ ವೈವಿಧ್ಯಮಯ ಪ್ರರ‍್ಶನವನ್ನು ನೀಡುವರೇ ನರ‍್ಧರಿಸಲಾಯಿತು. ಮುಂಬಯಿಯ ಖ್ಯಾತ ಯಕ್ಷಗಾನ ಕಲಾವಿದ ಲೇಖಕ ದಾಮೋದರ ಶೆಟ್ಟಿ ಇರುವೈಲು ನೇತೃತ್ವದಲ್ಲಿ ಯಕ್ಷಗಾನ, ಖ್ಯಾತ ರಂಗನರ‍್ದೇಶಕ ಲೇಖಕ, ನಾರಾಯಣ ಶೆಟ್ಟಿನಂದಳಿಕೆ ಅವರ ಮರ‍್ಗರ‍್ಶನದಲ್ಲಿ ಯುವ ರಂಗಪ್ರತಿಭೆ ಚಿನ್ಮಯ್ಮೋಹನ್ಸಾಲ್ಯಾನ್ ಅವರ ತಂಡದಿಂದ ನಾಟಕ, ಮಹಾನಗರದ ಖ್ಯಾತ ಸಂಗೀತ ನರ‍್ದೇಶಕ ಪದ್ಮನಾಭ ಸಸಿಹಿತ್ಲು ಅವರ ನರ‍್ದೇಶನದಲ್ಲಿ ಸಂಗೀತ ರಸಮಂಜರಿ, ರಂಗನಟಿ ಚಂದ್ರಾವತಿ ದೇವಾಡಿಗ ಅವರ ಮುಂದಾಳತ್ವದಲ್ಲಿ ವಿದೂಷಿ ಅಮಿತಾಜತನ್, ಅಂಕಿತಾ ನಾಯಕ್, ಶ್ರೇಯಸ್ ಹೆಗ್ಡೆಇವರ ತಂಡಗಳಿಂದ ನೃತ್ಯ, ಸಮೂಹನೃತ್ಯ ಮುಂತಾದ ಪ್ರರ‍್ಶನ ಕಲೆಗಳು ನೆರವೇರಲಿದೆ ಎಂದರು.

ಮುಂಬಯಿಯ ವಿವಿಧ ಕಲಾ ಪ್ರಕಾರಗಳ ಕಲಾವಿದ ಸದಸ್ಯ ಬಾಂಧವರು, ಸಂಘಟಕರು ,ಕಲಾಭಿಮಾನಿಗಳು, ಹಾಗೇಯೇ ನಮ್ಮ ಆತ್ಮೀಯ ಕಲಾಪೋಷಕರು ಕಲಾಪ್ರೇಕ್ಷಕರು, ಎಲ್ಲರೂ ಕರ‍್ಯಕ್ರಮದಲ್ಲಿ ಪಾಲ್ಗೊಂಡು ಕಲಾಮಹೋತ್ಸವವನ್ನು ಯಶಸ್ವಿ ಗೊಳಿಸಬೇಕಾಗಿ ಡಾ| ಸುರೇಂದ್ರಕುಮಾರ್ ಹೆಗ್ಡ್ಡೆ (ಅಧ್ಯಕ್ಷರು), ಕಮಲಾಕ್ಷ ಜಿ.ಸರಾಫ್ ಮತ್ತು ಸಿಎ| ಶ್ರೀನಿವಾಸ ಪಿ.ಸಾಫಲ್ಯ (ಉಪಾಧ್ಯಕ್ಷರು), ಚಂದ್ರಶೇರ‍್ಭಟ್ (ಗೌ| ಕರ‍್ಯರ‍್ಶಿ) ಪಿ.ಬಿ.ಚಂದ್ರಹಾಸ (ಗೌ| ಕೋಶಾಧಿಕಾರಿ) ಚಂದ್ರಾವತಿ ದೇವಾಡಿಗ (ಜೊತೆ ಕರ‍್ಯರ‍್ಶಿ) ನವೀನ್ ಶೆಟ್ಟಿ ಇನ್ನಬಾಳಿಕೆ (ಜೊತೆ ಕೋಶಾಧಿಕಾರಿ) ಹಾಗೂ ಕರ‍್ಯಕಾರಿ ಸಮಿತಿ ಮತ್ತು ರ‍್ವಸದಸ್ಯರು ವಿನಂತಿಸಿದ್ದಾರೆ.