Image: India.com

1999 ರ ಕಾರ್ಗಿಲ್ ಯುದ್ಧ ಭಾರತದ ಇತಿಹಾಸದ ಪುಟಗಳಲ್ಲಿ ಎಂದಿಗೂ ಪ್ರಸಿದ್ಧ. ಜುಲೈ 26 ಇಂದಿಗೆ 23 ವರ್ಷವಾಯಿತು ಯುದ್ಧವಾಗಿ. 2 ನೇ ವಿಶ್ವ ಯುದ್ಧದ ನಂತರ, ಅನೇಕ ಶಸ್ತ್ರಾಸ್ತ್ರಗಳನ್ನು ಬಳಸಿದ ಮೊದಲ ಮತ್ತು ದೊಡ್ಡ ಯುದ್ಧ ಈ ಕಾರ್ಗಿಲ್ ಯುದ್ಧ. ಕಾಶ್ಮೀರದ ಕಾರ್ಗಿಲ್ ಎಂಬ ಜಿಲ್ಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧವಿದು. ಪಾಕ್ ನುಸುಳುಕೋರರು ಕಾಶ್ಮೀರವನನ್ನು ಆಕ್ರಮಿಸಿದ್ದು ಮತ್ತು ಪಾಕ್ ಸೈನಿಕರು ಭಾರತದ ಗಡಿ ನಿಯಮ ಉಲ್ಲಂಘಿಸಿ ಅತಿರೇಕದ ವರ್ತನೆಯನ್ನು ತೋರಿದ್ದರಿಂದ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಎರಡೂ ಕಡೆಯ ಸೈನಿಕರು ಅಪಾರ ಪ್ರಮಾಣದಲ್ಲಿ ಜೀವತೆತ್ತರು. ಅಂತಿಮವಾಗಿ 2 ತಿಂಗಳು, 3 ವಾರ, 2 ದಿನಗಳು ನಡೆದ ಈ ಯುದ್ಧದಲ್ಲಿ ಭಾರತ ಜಯಭೇರಿ ಬಾರಿಸಿ, ಕುತಂತ್ರಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿತ್ತು. ಈ ದಿನದ ಸವಿ ನೆನಪಿಗಾಗಿ 26 ಜುಲೈ ನ್ನು ಕಾರ್ಗಿಲ್ ವಿಜಯೋತ್ಸವದ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಯುದ್ಧದಲ್ಲಿ ಭಾಗವಹಿಸಿ, ಯಶಸ್ವಿಯಾಗಿಸಲು ಶ್ರಮ ಪಟ್ಟ ಪ್ರಮುಖರಿಗೆ ಸರ್ಕಾರ ಪರಮವೀರ ಚಕ್ರದಂತಹ ಗೌರವಗಳನ್ನು ಸಲ್ಲಿಸಿದೆ. ನಮ್ಮ ಯೋಧರು ನಮ್ಮ ಹೆಮ್ಮೆ.

ಈ ಸುದಿನದಂದು ನಮ್ಮ ದೇಶದ ಒಬ್ಬ ಹೆಮ್ಮೆಯ ಯೋಧನ ಜನ್ಮದಿನ. ನಾಗೇಶ್ ಗಡಿಗೇಶ್ವರ ಎಂಬಿವರು, ಚಿಕ್ಕಮಗಳೂರು ಜಿಲ್ಲೆಯ ಗಡಿಗೇಶ್ವರ ಎಂಬ ಪುಟ್ಟ ಹಳ್ಳಿಯಲ್ಲಿ, ಹುಟ್ಟಿ ಬೆಳೆದು, ಕಷ್ಟಗಳು, ಜೀವನದ ಅನೇಕ ಏಳುಬೀಳುಗಳನ್ನು ದಾಟಿ ಬದುಕು ಕಟ್ಟಿಕೊಂಡಿದ್ದಾರೆ. ಅವರೊಳಗಿದ್ದ ಅಮೋಘ ದೇಶಪ್ರೇಮದಿಂದ ಭಾರತೀಯ ಸೇನೆಯನ್ನು ಸೇರಿ, ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಹೆಸರು ಮಾಡುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಆಧ್ಯಾತ್ಮ ಸಾಧಕರೂ ಹೌದು. ಮಸಣದ ಕಾವಲುಗಾರ ಎಂಬ ಕಾವ್ಯನಾಮದಡಿ, ಜನಜೀವನಕ್ಕೆ ಬರಹದಿಂದ  ಜ್ಞಾನಮಾರ್ಗ ತೋರಿಸಿ ಬೆಳಕಾಗುತ್ತಿದ್ದರೆ. ನೊಂದವರಿಗೆ ಹೆಗಲಾಗಿ, ಅತ್ಯುತ್ತಮ ಸ್ನೇಹಿ, ಮಗ, ಆಪ್ತರಕ್ಷಕನಾಗಿ, ಮಾರ್ಗದರ್ಶಿಯಾಗಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾ, ದೇಶ ಸೇವೆಯ ಜೊತೆಗೆ ಸಮಾಜ ಸೇವೆಯನ್ನೂ ಮಾಡಿ, ತಮ್ಮದೇ ಆದರ್ಶಗಳಡಿ ಹೇಗೆ ಬದುಕಿ ಬಾಳಬಹುದು ಎಂದು ತೋರಿಸಿಕೊಡುತ್ತಿದ್ದಾರೆ. ಗುರು ರಾಯರ ಪರಮ ಭಕ್ತರು.

" ಇಂದೇ ಮಾಡು ನಿನ್ನಯ ಜಾತ್ರೆ ನಾಳೆ ಇರಬಹುದೇನೊ ಮಸಣಕ್ಕೆ ಯಾತ್ರೆ " ಎಂಬ ಮಾತಿನ ಮೂಲಕ ಪ್ರತಿಕ್ಷಣ ಈ ಜೀವನವನ್ನು ಹೇಗೆ ಸಂಭ್ರಮಿಸಬೇಕು ಎಂದು ಹೇಳುತ್ತಾರೆ. ಸಾಮಾನ್ಯ ಹಿನ್ನೆಲೆಯಿಂದ ಬಂದು ಅಸಾಮಾನ್ಯ ಬದುಕನ್ನು ಕಟ್ಟಿಕೊಂಡ ಇವರು ನಮಗೆಲ್ಲ ಸ್ಪೂರ್ತಿ. ಇಂತಹ ಹೆಮ್ಮೆಯ ಯೋಧನ ಜನ್ಮದಿನಕ್ಕೆ ನಮ್ಮದೊಂದು ಶುಭಹಾರೈಕೆ ಕೋರೋಣವೆ...

ಜನ್ಮದಿನದ ಶುಭಾಶಯಗಳು ನಾಗೇಶ್ ಜಿ. ಆ ದೇವರು ಇನ್ನೂ ಅನೇಕ ವರ್ಷಗಳ ಕಾಲ ದೇಶಸೇವೆ ಮಾಡುವಂತ ಶಕ್ತಿಯನ್ನು ನಿಮಗೆ ನೀಡಲಿ. ಸದಾಕಾಲ ನೆತ್ತಿಯನ್ನು ಕಾಯಲಿ...


- ಪಲ್ಲವಿ ಚೆನ್ನಬಸಪ್ಪ