ಬಿಜೆಪಿಯು ಬಳಸಿ ಬಿಸಾಡುವ ನೀತಿಯನ್ನು ಹಿಂದಿನಿಂದಲೂ ಅನುಸರಿಸುತ್ತಿದೆ. ನೀವು ಅದಕ್ಕೆ ಕುಗ್ಗದೆ ಎಎಪಿ ಪಕ್ಷದ ಅಭ್ಯರ್ಥಿಯಾಗಿ ಪಣಜಿಯಿಂದ ಸ್ಪರ್ಧಿಸುವಂತೆ ಕೇಜ್ರೀವಾಲ್ ಅವರು ಉತ್ಪಲ್ ಪರಿಕ್ಕರ್ ಅವರಿಗೆ ಕರೆ ನೀಡಿದ್ದಾರೆ.
ಮಾಜೀ ಮುಖ್ಯಮಂತ್ರಿ ಮತ್ತು ರಕ್ಷಣಾ ಸಚಿವ ದಿವಂಗತ ಮನೋಹರ ಪರಿಕ್ಕರ್ ಅವರ ಕ್ಷೇತ್ರ ಪಣಜಿ. ಆದರೆ ಬಿಜೆಪಿಯು ಅವರ ಮಗ ಉತ್ಪಲ್ ಪರಿಕ್ಕರ್‌ಗೆ ಟಿಕೆಟ್ ನೀಡಿಲ್ಲ. ಅಲ್ಲಿ ಬಾಬುಶಾ ಎಂಬ ಕ್ರಿಮಿನಲ್‌ಗೆ ಬಿಜೆಪಿ ಟಿಕೆಟ್ ನೀಡಿದೆ ಎಂದು ಉತ್ಪಲ್ ಆಪಾದಿಸಿದ್ದಾರೆ. ಈಗ ಆಮ್ ಆದ್ಮಿ ಪಕ್ಷದ ಕೇಜ್ರೀವಾಲ್ ಅವರು ಉತ್ಪಲ್‌ರಿಗೆ ತಮ್ಮ ಪಕ್ಷದಿಂದ ಸ್ಪರ್ಧಿಸಲು ಕರೆ ನೀಡಿದ್ದಾರೆ.