ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ  ಏಳಿಂಜೆಯಲ್ಲಿ ಯುವಕನೋರ್ವ  17 ಗುಡು ದೀಪಗಳನ್ನು ತಯಾರಿಸಿ ಗಮನ ಸೆಳೆದಿದ್ದಾನೆ, ವಿಶೇಷ ಅಂದರೆ ಗೂಡು ದೀಪ ತಯಾರಿಸಿದ ವ್ಯಕ್ತಿ  ಮಾತ್ರ ಮುಸ್ಲಿಂ ಯುವಕ ಅಸ್ಪಾಕ್‌ ಆಗಿದ್ದು ಏಳಿಂಜೆ ಕೋಜಾಲಗುತ್ತಿನ ಕೌಶಲ್ಯ ಶೆಟ್ಟಿ ಅವರು ಮೂಲತಹ ಬಾಗಲ ಕೋಟೆಯವನಾಗಿದ್ದ ಅಸ್ಪಾಕ್ ಎಂಬ ಯುವಕನನ್ನು ಬಾಲ್ಯದಿಂದಲೇ ಸಾಕಿದ್ದು ಅವನಿಗೆ ಸರಿಯಾದ ವಿದ್ಯಾಬ್ಯಾಸ ಕೊಡಿಸಿದ್ದಾರೆ. 

ಪ್ರಸ್ತುತ ಆತ ನಿಟ್ಟೆ ಇಂಜಿನೀಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ವಿಷಯದಲ್ಲಿ ಮೊದಲ ವರ್ಷಾ ಡಿಪ್ಲೊಮೋ ಮಾಡುತ್ತಿದ್ದು, ಅಸ್ಪಾಕ್ ಅತ್ಯಂತ ಚುರುಕಿನ ಯುವಕನಾಗಿದ್ದು ಪ್ರತೀ ವರ್ಷ ದೀಪಾವಳಿಗೆ ಗೂಡು ದೀಪಗಳನ್ನು ಮಾಡುವ ಹವ್ಯಾಸವನ್ನು ಹೊಂದಿದ್ದಾನೆ, ಗೂಡು ದೀಪ ತನ್ನ ಸಂಸ್ಕೃತಿಯಲ್ಲದ್ದಿದ್ದರೂ ಈ ಬಗ್ಗೆ ವಿಶೇಷ ಅಸಕ್ತೈ ವಹಿಸಿ ಪ್ರತೀ ವರ್ಷ ಹಲವು ಗೂಡುದೀಪಗಳನ್ನು ರಚಿಸುತ್ತಾನೆ, ಅಷ್ಟು ಮಾತ್ರವಲ್ಲದೆ ಆತ ಐದು ವರ್ಷಗಳಿಂದ ಗಣೇಶ ಚತುರ್ಥಿಗೆ ಹುಲಿ ವೇಷ ಹಾಕುತ್ತಿದ್ದಾನೆ. ಸುಮಾರು ಎಂಟು ವರ್ಷದಿಂದ ಈ ಅಸಕ್ತಿಯನ್ನು ಬೆಳೆಸಿದ ಈತನಿಗೆ  ಕೌಶಲ್ಯ ಶೆಟ್ಟಿ ಯವರು ಪ್ರೋತ್ಸಾಹ ನೀಡುತ್ತಿದ್ದಾರೆ. ಬೇರೆ ಧರ್ಮವಾಗಿದ್ದರೂ ಹಿಂದೂ ಧರ್ಮದ ಬಗೆಗಿನ ಈತನ ಆಸಕ್ತಿಯನ್ನು ಮೆಚ್ಚಲೇ ಬೇಕಾಗಿದೆ.

ವಿಶೇಷ ವರದಿ ಮತ್ತು ಚಿತ್ರ Sudeep Dsouza Kinnigoli