ಮಂಗಳೂರು, ಮಾ.07: ವಿದ್ಯಾರ್ಥಿಗಳು ಪಾಠವನ್ನು ಕೇಳಿ ಪರೀಕ್ಷೆಯ ತಯಾರಿಯನ್ನು ಮಾತ್ರವೇ ಮಾಡದೆ ಸಮಾಜದ ಆಗುಹೋಗುಗಳ ಗಮನವನ್ನು ಇಟ್ಟುಕೊಂಡು ಇರಬೇಕು. ಶಿಕ್ಷಣ ಮುಗಿದ ಕೂಡಲೇ ಕೆಲಸ ಹುಡುಕುವಾಗ ಕೇವಲ ಶಾಲೆ ಕಾಲೇಜಿನ ಉತ್ತೀರ್ಣ ಸಾಕಾಗದು ಎಂದು ಮಂಗಳೂರು ವಿವಿಯ ಕುಲಸಚಿವರಾದ ರಾಜು ಮೊಗವೀರ ಕೆಎಎಸ್ ನುಡಿದರು.

ಅವರು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಕನ್ನಡ ಸಂಘ, ಉದ್ಯೋಗ ಮತ್ತು ವೃತ್ತಿ ಸಮಾಲೋಚನಾ ಕೋಶವು, ದಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ನಗರ ಹೋಬಳಿ ಘಟಕದ ಜೊತೆಗೆ ಸೇರಿ ವಿಧ್ಯಾರ್ಥಿಗಳಿಗೆ ಆಯೋಜಿಸಿದ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ತಯಾರಿ ಕಾರ್ಯಾಗಾರವನ್ನು ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಬಂದ ಸಹಾಯಕ ನಿರ್ದೇಶಕರು ಮೀನುಗಾರಿಕೆ ಇಲಾಖೆ ಕೊಡಗು ಇದರ ಮಿಲನ್ ಕೆ ಭರತ್ ಮಾತನಾಡಿ ನಮ್ಮ ಮನಸ್ಥಿತಿಯನ್ನು ಹತಾಶೆ ಕಡೆಗೆ ಕೊಂಡೊಯ್ಯದೆ ಒಂದು ಹೆಜ್ಜೆ ನಡೆಯುವ ಸಂಕಲ್ಪ ನಾವು ದಿನವೂ ಉಳಿಸಿಕೊಂಡು ಇರಬೇಕು ಆಗಲೇ ಯಶಸ್ಸು, ಎಂದರು.

ಸ್ಪರ್ಧಾತ್ಮಕ ಯಾವುದೇ ಪರೀಕ್ಷೆಯ ಬಗ್ಗೆ ಉಚಿತ ಮಾಹಿತಿ ಮತ್ತು ತರಭೇತಿ ನೀಡುವ ವಾಗ್ದಾನ ಮಾಡಿದರು.

ಅಧ್ಯಕ್ಷರಾದ ವಿವಿ‌ ಕಾಲೇಜಿನ ಪ್ರಾಂಶುಪಾಲರಾದ ಗಣಪತಿ ಗೌಡ ಅವರು ಸರಕಾರಿ ಕಾಲೇಜಿನ ಎಲ್ಲಾ ವಿಧ್ಯಾರ್ಥಿಗಳು ಪಾಸಾಗುವ ಸರ್ವ ಪ್ರಯತ್ನ ನಮ್ಮ ಗುರಿ ಅಂದರು.

ಮುಖ್ಯ ಆತಿಥಿ ಲಯನ್ ಚಂದ್ರಹಾಸ ಶೆಟ್ಟಿಯವರು ತಮ್ಮ ಜೀವನದ ಗುರಿಯನ್ನು ಸಾಧಿಸಲು ‌ಎಲ್ಲಾ ವಿದ್ಯಾರ್ಥಿಗಳು ಉತ್ಸುಕರಾಗಿರಬೇಕು ಎಂದರು.

ಉದ್ಯೋಗ ಮತ್ತು ವ್ಯಕ್ತಿ ಸಮಾಲೋಚನಾ ಕೋಶ ಮುಖ್ಯಸ್ಥರಾದ ಡಾ ಭಾರತಿ‌‌ ಪ್ರಕಾಶ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾದ ‌ಡಾ ಎಲ್ ಲಕ್ಷ್ಮೀದೇವಿ ಶುಭಹಾರೈಸಿದರು.

ಮೊದಲಿಗೆ ಕಸಾಪ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರು, ಕನ್ನಡ ಸಂಘ ನಿರ್ದೇಶಕರಾದ ಮಾಧವ ಎಂಕೆ ಸ್ವಾಗತಿಸಿ, ಕಸಾಪ ಮಂಗಳೂರು ನಗರ ಹೋಬಳಿ ಆಧ್ಯಕ್ಷರಾದ ರೇಮಂಡ್ ಡಿಕೂನಾ ತಾಕೊಡೆ ವಂದಿಸಿದರು. ವಿಧ್ಯಾರ್ಥಿನಿ ಅನಿತ ಪರಿಚಯ ಮಾಡಿದರು ಮತ್ತು ಎಸ್ ಎನ್ ಸ್ವಪ್ನ ನಿರೂಪಿಸಿದರು.

ಎಲ್ಲಾ ವಿಭಾಗದ ಶಿಕ್ಷಕರು, ಮತ್ತು ವಿಧ್ಯಾರ್ಥಿಗಳು ಹಾಜರಿದ್ದರು.