ಜಗತ್ತಿನಲ್ಲಿ ಮತ್ತೆ ಕೋವಿಡ್‌ ತನ್ನ ಕರಾಮತ್ತು ತೋರಿಸಿದೆ. ಓಮೈಕ್ರಾನ್ ಸೌಮ್ಯತೆ ತೊರೆದು ಹರಡುತ್ತಿದೆ. ಕಳೆದ 24 ಗಂಟೆಗಳಲ್ಲಿ ಮತ್ತು 24 ಗಂಟೆಗಳಲ್ಲಿ ಜಾಗತಿಕವಾಗಿ 6.5 ಮತ್ತು 4.8 ಲಕ್ಷದಷ್ಟು ಕೊರೋನಾ ಸೋಂಕಿತರು ಹೊಸದಾಗಿ ಸೇರ್ಪಡೆಯಾದರು. ಅದೇ ವೇಳೆ ಶನಿವಾರ ಹಾಗೂ ಆದಿತ್ಯವಾರ ಕೊರೋನಾ ಸಾವಿಗೀಡಾದವರ ಸಂಖ್ಯೆ 6 ಮತ್ತು 4 ಸಾವಿರದಷ್ಟು ಇತ್ತು. ಜಗತ್ತಿನಲ್ಲಿ ಈಗ ಒಟ್ಟಾರೆ ಸೋಂಕಿಗೀಡಾದವರ ಸಂಖ್ಯೆ 27,50,07,350. ಅದೇ ವೇಳೆ ಸಾವು ಮೊತ್ತವು 53,70,192 ದಾಟಿ ಸಾಗಿದೆ.

ಭಾರತದಲ್ಲಿ ಕೋವಿಡ್‌ ಸಾಂಕ್ರಾಮಿಕ ಕಡಿಮೆಯಾಗಿದೆ   ಎನ್ನುವುದಕ್ಕೆ ಯಾವ ಆಧಾರವೂ ಸಿಗುತ್ತಿಲ್ಲ. ನಿನ್ನೆ ದಿನ ಮತ್ತು ಮೊನ್ನೆ ದಿನ ನಮ್ಮ ಜನ 7,087 ಮತ್ತು 7,145 ಮಂದಿ ಹೊಸದಾಗಿ ಸೋಂಕು ಸಾಂಕ್ರಾಮಿಕಕ್ಕೆ ಒಳಗಾದರು. ಇದರೊಂದಿಗೆ ದೇಶದ ಒಟ್ಟು ಸೋಂಕಿತರ ಸಂಖ್ಯೆಯು 3,47,42,636 ದಾಟಿತು. ರವಿವಾರ ಮತ್ತು ಶನಿವಾರ ದಿನ ನಮ್ಮ ಜನ ದೇಶದಲ್ಲಿ 264 ಹಾಗೂ 289 ಮಂದಿ ಕೊರೋನಾ ಸಾವು ಕಂಡರು. ಇದರ ಸಹಿತ ದೇಶದಲ್ಲಿ ಕೋವಿಡ್‌ ಮೃತ್ಯು ದಂಡಕ್ಕೆ ಬಲಿಯಾದವರ ಸಂಖ್ಯೆಯು 4,77,422 ಮುಟ್ಟಿತು.

ಕರ್ನಾಟಕದಲ್ಲಿ ಶನಿವಾರದ ಮತ್ತು ರವಿವಾರದ 24 + 24 ಗಂಟೆಗಳಲ್ಲಿ ಕೊರೋನಾ ಸಾವು 5  ಹಾಗೂ 1 ಸಂಭವಿಸಿದೆ. ಇದರೊಂದಿಗೆ ಸಾವಿನ ಒಟ್ಟು ಸಂಖ್ಯೆಯು 38,288 ತಲುಪಿದೆ.  ನಿನ್ನೆ ಹಾಗೂ ಮೊನ್ನೆ ದಿನ ರಾಜ್ಯದಲ್ಲಿ ಹೊಸದಾಗಿ ಸೋಂಕಿತರಾದವರ ಸಂಖ್ಯೆ 300 ಮತ್ತು 335. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 30,02,427 ದಾಟಿತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ (ಶನಿವಾರ)ಹೊಸದಾಗಿ ಕೊರೋನಾ ಸಾವು ಒಂದು ಸಂಭವಿಸಿದೆ. ಸಾವು ಮೊತ್ತವು 1,699ಕ್ಕೇರಿದೆ. ಶನಿವಾರ ಮತ್ತು ಭಾನುವಾರ ಜಿಲ್ಲೆಯಲ್ಲಿ 19 ಮತ್ತು 37 ಜ‌ನ ಹೊಸದಾಗಿ ಸೋಂಕಿಗೆ ಒಳಗಾಗಿದ್ದು, ಸೋಂಕಿತರ ಒಟ್ಟು ಸಂಖ್ಯೆಯು 1,16,188 ದಾಟಿದೆ.

ಉಡುಪಿಯಲ್ಲಿ ಶನಿವಾರ ದಿನ ಕೋವಿಡ್‌ ಸಾವು ಸಂಭವಿಸಿಲ್ಲ. ಭಾನುವಾರ ಒಂದು ಸಾವಾಗಿದೆ. ಸಾವು ಮೊತ್ತವು 488ಕ್ಕೇರಿದೆ. ನಿನ್ನೆ ದಿನ ಹಾಗೂ ಮೊನ್ನೆ ದಿನ  ಉಡುಪಿಯಲ್ಲಿ ಕೊರೋನಾ ಸೋಂಕು ತಗುಲಿದವರ ಸಂಖ್ಯೆ 2 ಮತ್ತು 6, ಅಲ್ಲಿಗೆ ಒಟ್ಟು ಸೋಂಕಿತರ ಸಂಖ್ಯೆ 76,980 ಆಯಿತು.