ಸುಳ್ಯ ತಾಲೂಕಿನ ನರ್ಲಡ್ಕದಲ್ಲಿ ಹಳೆಯ ಶೌಚಾಲಯದ ಗೋಡೆ ಕೆಡಹುವಾಗ ಅದು ಮೇಲೆ ಬಿದ್ದುದರಿಂದ ಇಬ್ಬರು ಮಹಿಳೆಯರು ಸಾವಿಗೀಡಾದರು.
ಮಹಮ್ಮದ್ ಎಂಬವರ ಮಡದಿ 60ರ ಬೀಫಾತುಮ್ಮ, ರಶೀದ್ ಎಂಬವರ ಹೆಂಡತಿ 45ರ ನೆಬಿಸಾ ಸಾವಿಗೀಡಾದವರು. ಹರೀಶ್ ನಾಯ್ಕ್ ಎಂಬವರ ಹಳೆಯ ಶೌಚಾಲಯ ಒಡೆದು ಹೊಸದು ಕಟ್ಟುವ ಕೆಲಸದಲ್ಲಿ ಇತರರೊಂದಿಗೆ ಇವರು ಸೇರಿಕೊಂಡಿದ್ದರು.
ಕೂಡಲೆ ಆಸ್ಪತ್ರೆಗೆ ಒಯ್ಯಲಾಯಿತಾದರೂ ದಾರಿಯಲ್ಲೇ ಅವರು ಮರಣಿಸಿದ್ದರು. ಬೆಳ್ಳಾರೆ ಪೋಲೀಸರು ಬಂದು ಮಹಜರು ನಡೆಸಿದರು.