ದೆಹಲಿ, ಹರಿಯಾಣಗಳಲ್ಲಿ ಜೋರಾಗಿ ಮತ್ತು ಕರ್ನಾಟಕ ಮತ್ತು ದೇಶದ ಇತರೆಡೆ ಮತ್ತೆ ಕೊರೋನಾ ಏರು ಹಾದಿ ತುಳಿದಿರುವುದರಿಂದ ಕರ್ನಾಟಕದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಕೆಲಸದ ಜಾಗದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಇಲ್ಲದವರಿಗೆ ದಂಡ ಕಾದಿದೆ.

ನಿನ್ನೆ ಕರ್ನಾಟಕದಲ್ಲಿ ಗೆಜೆಟ್ ಪ್ರಕಟಣೆ ಆಗಿದ್ದು, ಆರೋಗ್ಯ ಮಂತ್ರಿ ಸುಧಾಕರ್‌ ಅದನ್ನು ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಉಗಿದರೆ ದಂಡ ಹಾಕಲು ಸೂಚಿಸಲಾಗಿದೆ. ಸಾರ್ವಜನಿಕವಾಗಿ ಎರಡು ಅಡಿ ಅಂತರ ಕಾಯ್ದುಕೊಳ್ಳಲು ಸಹ ತಿಳಿಸಲಾಗಿದೆ.