ಬಿಜೆಪಿಯ ಬಂಟ್ವಾಳ ಮಂಡಳದವರ ವಿಶಿಷ್ಟ ಕಮಲೋತ್ಸವ ಕಾರ್ಯಕ್ರಮವು ಅಲ್ಲಿನ ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ವದಲ್ಲಿ ಏಪ್ರಿಲ್ 24ರಂದು ಶಾಸಕರ ಒಡ್ಡೂರು ಫಾರಂನಲ್ಲಿ ನಡೆಯುತ್ತದೆ ಎಂದು ಬಂಟ್ವಾಳ ಬಿಜೆಪಿ ನಾಯಕ ದೇವಪ್ಪ ಪೂಜಾರಿ ಅವರು ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.

ಬಂಟ್ವಾಳದ ಎಲ್ಲ ಗ್ರಾಮಗಳ ಬಿಜೆಪಿ ಕುಟುಂಬದವರನ್ನು ಒಟ್ಟುಗೂಡಿಸುವ ಕಾರ್ಯಕ್ರಮ ಇದು. ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಂತ್ರಿಗಳಾದ ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್ ಮೊದಲಾದವರು ಇದರಲ್ಲಿ ಭಾಗವಹಿಸುವರು ಎಂದು ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಹೇಳಿದರು.

ಕೃಷಿ ಮಾಹಿತಿ, ಆಟೋಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಇದರಲ್ಲಿ ಇರುತ್ತದೆ.

ಬಡಗ ಕಜೆಕಾರಿನ ಲೋಕೇಶ್ ಪೂಜಾರಿ ಎಂಬ ಬಿಜೆಪಿ ಕಾರ್ಯಕರ್ತ ಸಿಡಿಲು ಬಡಿದು ನಿನ್ನೆ ಮೃತರಾದರು. ಶಾಸಕ ರಾಜೇಶ್ ನಾಯ್ಕ್ ಅವರು ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಕಾರಣ ಅವರು ಪತ್ರಿಕಾಗೋಷ್ಠಿ ನಡೆಸಲು ಸಾಧ್ಯವಾಗಲಿಲ್ಲ ಎಂದು ಮಾಹಿತಿ ನೀಡಲಾಯಿತು.

ಫುಟ್ಬಾಲ್ ಪಂದ್ಯಾವಳಿ, ಶಾಟ್ ಪಟ್, ತ್ರೋಬಾಲ್, ಗಾಳಿಪಟ, ಜನಪದ, ದೇಶಭಕ್ತಿ ಗೀತೆ ಇತ್ಯಾದಿ ನಡೆಯಲಿದೆ. ಇದರಲ್ಲಿ 15,000 ಜನರನ್ನು ಒಗ್ಗೂಡಿಸಲಾಗುವುದು ಎಂದು ದೇವದಾಸ್ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಂಟ್ವಾಳದ ಬಿಜೆಪಿಯ ಪ್ರಮುಖರಾದ ದೇವದಾಸ್ ಶೆಟ್ಟಿ, ರೊನಾಲ್ಡ್ ಡಿಸೋಜಾ, ರಂಜಿತ್ ಮೈರ, ಯಶೋಧರ ಮೊದಲಾದವರು ಉಪಸ್ಥಿತರಿದ್ದರು.