ಮೂಡುಬಿದ್ರೆ: ಮೂಡುಬಿದ್ರೆ ಆಳ್ವಾಸ್ ಆಸ್ಪತ್ರೆ ರಸ್ತೆಯ ಬದಿಯನ್ನು ತಕ್ಷಣ ಸ್ವಚ್ಚಗೊಳಿಸಿದ ಪುರಸಭಾ ಸ್ವಚ್ಛ ಕಾರ್ಮಿಕರು ನಿನ್ನೆ ಅಷ್ಟೇ ಪಿಂಗಾರ ಪತ್ರಿಕೆಯಲ್ಲಿ ಸಚಿತ್ರವಾಗಿ ಪ್ರಕಟವಾದ ಮೂಡುಬಿದಿರೆ ಬಸ್ಸು ನಿಲ್ದಾಣದಿಂದ ಆಳ್ವಾಸ್ ಆಸ್ಪತ್ರೆಗೆ ಹೋಗುವ ರಸ್ತೆಯ ಬದಿಗಳಲ್ಲಿ ಎದುರಿಗೆ ಕಾಣದಂತೆ ಪರಿಸರದಲ್ಲಿದ್ದ ಫ್ಲಾಟ್ ನಲ್ಲಿರುವ ಮಂದಿ ಮೂಲೆಗಳಲ್ಲಿ ಎಸೆಯುತ್ತಿದ್ದ ಕೊಳಚೆ ಕಲ್ಮಲ ಇತ್ಯಾದಿಗಳನ್ನು ತಕ್ಷಣವೇ ಸಂಪೂರ್ಣ ಸ್ವಚ್ಛಗೊಳಿಸಿದ್ದಾರೆ. 

ಮೂಡುಬಿದಿರೆಯ ಪುರಸಭಾ ಸ್ವಚ್ಛ ಕಾರ್ಮಿಕರು ಒಂದೇ ದಿನದಲ್ಲಿ ಎಲ್ಲವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ತಮ್ಮ ಕಾರ್ಯವನ್ನು ಬಹಳ ಸುಂದರವಾಗಿ ನಡೆಸಿಕೊಟ್ಟಿದ್ದಾರೆ. ಆದರೆ ಪರಿಸರದಲ್ಲಿರುವ ವ್ಯಕ್ತಿಗಳು ಪುರಸಭಾ ಸ್ವಚ್ಛಕಾರ್ಮಿಕರ ಈ ಕಾರ್ಯಕ್ಕೆ ಕೈಗೂಡಿಸಿ ಇನ್ನು ಮುಂದೆ ಯಾವತ್ತಿಗೂ ಇಂತಹ ಕೊಳಕು, ಕಶ್ಯಲ ಇತ್ಯಾದಿಗಳನ್ನು ತಂದು ಹಾಕದೇ ಇರುವಂತೆ ಮನಸ್ಸು ಮಾಡಬೇಕಾಗಿದೆ.

ಇನ್ನಾದರೂ ಮೂಡುಬಿದಿರೆಯ ನಾಗರಿಕರು ತಿಳಿದವರಂತೆ ಸ್ವಚ್ಛತೆಯನ್ನು ಮೈಗೂಡಿಸಿಕೊಂಡರೆ ಅವರಿಗೂ, ಇತರರಿಗೂ, ಸಮಾಜಕ್ಕೂ ಬಹಳ ದೊಡ್ಡ ಕೊಡುಗೆ ಕೊಟ್ಟಂತೆ. ಸ್ವಚ್ಛ ಕಾರ್ಮಿಕರ ಅತ್ಯುತ್ತಮ ಕಾರ್ಯಕ್ಕೆ ನಾವೆಲ್ಲರೂ ಧನ್ಯವಾದ ಸಲ್ಲಿಸಬೇಕಾಗಿದೆ. ಅದೇ ರೀತಿ ಈ ಕಾರ್ಯಕ್ಕೆ ಸಂಪೂರ್ಣ ಬೆಂಬಲವನ್ನು ನೀಡಿದ ಶಿಲ್ಪ ಮೇಡಂ ಹಾಗೂ ಇತರ ಎಲ್ಲಾ ಅಧಿಕಾರಿ ವರ್ಗಕ್ಕೆ ಅನಂತ ಧನ್ಯವಾದಗಳನ್ನು ಮೂಡುಬಿದಿರೆಯ ಸ್ವಚ್ಛತೆ ಬಯಸುವ ಮಂದಿ ನೀಡುತ್ತಿದ್ದಾರೆ.

ಸಚಿತ್ರ ವರದಿ ರಾಯಿ ರಾಜಕುಮಾರ್ ಮೂಡುಬಿದಿರೆ.


Previous Report:

ಸ್ವಚ್ಛ ಮೂಡುಬಿದಿರೆಯ ಅಂದ ಕೆಡಿಸುತ್ತಿರುವ ನಾಗರಿಕರು