ಮೂಡುಬಿದಿರೆ: ಇಂದು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆದ ಲಯನ್ಸ್  ಕ್ಲಬ್ ಮೂಡುಬಿದಿರೆ ಮಕ್ಕಳ ಕ್ರೀಡೋತ್ಸವ 2024 ರಲ್ಲಿ ರೋಟರಿ ಆಂಗ್ಲ ಮಾಧ್ಯಮ ಶಾಲೆ ಜ್ಯೋತಿನಗರ ಮೂಡುಬಿದಿರೆ ಶಾಲೆಯು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಕಿರಿಯ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ರಿಯಾ ದ್ವಿತೀಯ ಸ್ಥಾನವನ್ನು, ಉಜ್ವಲ್ ತೃತೀಯ ಸ್ಥಾನವನ್ನು, ಒಂಟಿ ಕಾಲಿನ ಓಟ ಸ್ಪರ್ಧೆಯಲ್ಲಿ   ದಿಯಾನ್ ನಾಯಕ್ ಪ್ರಥಮ ಸ್ಥಾನವನ್ನು, ಕಿರಿಯರ ವಿಭಾಗದ ಸ್ಮರಣ ಶಕ್ತಿ ಪರೀಕ್ಷೆಯಲ್ಲಿ ವಿ ಯಾದ್ವೀ ಪ್ರಥಮ ಸ್ಥಾನವನ್ನು ಫಾತಿಮಾ ರಿಝಾ ದ್ವಿತೀಯ ಸ್ಥಾನವನ್ನು , ಹಿರಿಯರ ವಿಭಾಗದಲ್ಲಿ ಸಾತ್ವಿಕ್ ಚಂದ್ರ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. 

ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದು ತಂಡದಲ್ಲಿ ಸಾಧ್ವಿ , ಧನ್ವಿ ಶೆಟ್ಟಿ, ಸರ್ವಾಣಿ, ರಿಶಾ, ಸಾನ್ವಿಕಾ, ಗೀತಿಕಾ, ಯುಕ್ತಿ, ಅದ್ವಿಕಾ ಶೆಟ್ಟಿ ಹಾಗೂ ಹಿಮ್ಮೇಳದಲ್ಲಿ ವರ್ಷಿಲ್, ಹರ್ಷ, ಗಾಯನದಲ್ಲಿ ಶಿಕ್ಷಕರಾದ ಮೋಹನ್ ಹೊಸ್ಮಾರ್ ಸಹಕರಿಸಿದರು.