ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆಯಲ್ಲಿ ಕಳೆದ 15 ವರ್ಷಗಳಿಂದ ಕಣ್ಣಿನ ಅತ್ಯುತ್ತಮ ಶಸ್ತ್ರ ಚಿಕಿತ್ಸೆ, ಇತರ ಚಿಕಿತ್ಸೆಗಳಿಗೆ ಹೆಸರುವಾಸಿಯಾಗಿರುವ ಶ್ರೀನಿವಾಸ ನೇತ್ರಾಲಯ ಈ ಸುಸಜ್ಜಿತ, ವಿಶಾಲ, ಸ್ವಂತ ಕಟ್ಟಡದಲ್ಲಿ ಎಲ್ಲಾ ರೀತಿಯ ಪ್ರತ್ಯ ಪ್ರತ್ಯೇಕ ತಜ್ಙತೆಯ ವಿಭಾಗದಲ್ಲಿ ದೀಪ ಬೆಳಗಿ ಉದ್ಘಾಟನೆ ಗೈದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಶುಭ ಹಾರೈಸಿದರು.
ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ಎಲ್ಲಾ ರೀತಿಯಲ್ಲೂ ಸಿದ್ಧಗೊಂಡ ಈ ಕಣ್ಣಿನ ಆಸ್ಪತ್ರೆ ನಾಗರಿಕರಿಗೆ ಇನ್ನಷ್ಟು ಉತ್ತಮ ರೀತಿಯಲ್ಲಿ ಸ್ಪಂದಿಸಿ ಬೆಳಗಲಿ ಎಂದು ಶುಭ ಹಾರೈಸಿದರು. ಮೇಲಂತಸ್ತಿನಲ್ಲಿ ಸುಸಜ್ಜಿತ ವಿಶಾಲ ಶಸ್ತ್ರ ಚಿಕಿತ್ಸೆ ಕೊಠಡಿಯನ್ನು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಉದ್ಘಾಟಿಸಿ ಇಂತಹ ಉತ್ತಮ ಸೌಲಭ್ಯ ಮೂಡುಬಿದಿರೆಯಂತಹ ನಗರದಲ್ಲಿ ಅಗತ್ಯವಿತ್ತು ಎಂದು ಶುಭ ಹಾರೈಸಿದರು. ವಿವಿಧ ವೈವಿಧ್ಯಮಯ ಕನ್ನಡಕಗಳ ಕಾಮಾಕ್ಷಿ ಆಪ್ಟಿಕಲ್ ನ್ನು ಮಾಜಿ ಸಚಿವ ಅಭಯ ಚಂದ್ರ ಜೈನ್ ಉದ್ಘಾಟಿಸಿ ಶುಭಹಾರೈಸಿದರು.
ವೇದಿಕೆಯಲ್ಲಿ ಮೂಡಾ ದ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ಫಾರ್ಚೂನ್ ಪ್ರೊಮೋಟರ್ ನ ಅಬುಲಾಲ್ ಪುತ್ತಿಗೆ, ದೇವಾಲಯದ ಟ್ರಸ್ಟ್ ನ ಉಮೇಶ್ ಪೈ, ಹಾಜರಿದ್ದರು. ನೇತ್ರಾಲಯದ ರೂವಾರಿ ಮುಖ್ಯಸ್ಥ ಡಾ.ಅರವಿಂದ ಕಿಣಿ ಸ್ವಾಗತಿಸಿದರು. ದಿನೇಶ್ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ನೇತ್ರಾಲಯದ ಮುಖ್ಯಸ್ಥೆ ಡಾ. ನಿವೇದಿತಾ ಕಿಣಿ ವಂದಿಸಿದರು.