ಮಂಗಳೂರು: ಮುಡಿಪು ಜೀವನ ಶಿಕ್ಷಣ ಕೇಂದ್ರದಲ್ಲಿ ನವ ಸಾಕ್ಷರರ ಸಂಘಟನೆಯ 30ನೇ ಜಿಲ್ಲಾ ಮಟ್ಟದ ಅಕ್ಷರೋತ್ಸವ -2021 ಭಾನುವಾರ ನಡೆಯಿತು. ಸಾಧಕರೊಂದಿಗೆ ಸಂವಾದ, ತ್ಯಾಜ್ಯ ಮುಕ್ತ ಸಂಪೂರ್ಣ ಸ್ವಚ್ಛ ಗ್ರಾಮ, ಸಂಪೂರ್ಣ ಲಸಿಕಾ ಗ್ರಾಮ,ಕರೊನಾ ಮುಕ್ತ ಗ್ರಾಮ, ಸಂಪೂರ್ಣ ಆರೋಗ್ಯ ಅಭಿಯಾನ, ಸುಸ್ಥಿರ ಅಭಿವೃದ್ಧಿ ಸಂಕಲ್ಪ ಕಾರ್ಯಕ್ರಮ ನಡೆಯಿತು.
ಹಿರಿಯ ಸಾಕ್ಷರತಾ ಕಾರ್ಯಕರ್ತ ಮಂಜುನಾಥ ಶೆಟ್ಟಿ ಅಕಾಲಿಕವಾಗಿ ನಿಧನ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ರದ್ದುಗೊಳಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜನಶಿಕ್ಷಣ ಸಂಸ್ಥೆ, ಸ್ಮೈಲ್ ಟ್ರಸ್ಟ್, ನವ ಸಾಕ್ಷರರ ಸಂಘ, ಗ್ರಾಮ ವಿಕಾಸ ಕೇಂದ್ರ ಗ್ರಾಮ ಪಂಚಾಯಿತಿ, ಮಂದಾರ ಸಂಜೀವಿನಿ ಒಕ್ಕೂಟ, ಚಿತ್ತಾರ ಬಳಗ, ಮಂಗಳಗಂಗೋತ್ರಿ ಲಯನ್ಸ್ ಕ್ಲಬ್,ಬಾಪು ಸಂಪನ್ಮೂಲ ಸಂಘ, ಆದಿವಾಸಿ ಅಭಿವೃದ್ಧಿ ಸಂಘ, ಸುಗ್ರಾಮ ಜಾಗೃತಿ ವೇದಿಕೆ, ಪ್ರಜ್ಞಾ ವಿ.ಟಿ.ಸಿ, ಸೆಲ್ಕೋ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನವ ಸಾಕ್ಷರರ ಸಂಘದ ಅಧ್ಯಕ್ಷೆ ಯಶೋದಾ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ರಮೇಶ್ ಶೇಣವ ಉದ್ಘಾಟಿಸಿದರು. ಮಂಗಳೂರು ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಪ್ರಶಾಂತ್ ನಾಯ್ಕ್ ಪ್ಲಾಸ್ಟಿಕ್ ಬಳಕೆ ಮತ್ತು ಅದನ್ನು ಸುಡುವುದರಿಂದ ಆರೋಗ್ಯ ಮತ್ತು ಪರಿಸರದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಿದರು.
ರಾಧಾಕೃಷ್ಣ ರೈ, ಪುಂಡರೀಕಾಕ್ಷ, ಶ್ಯಾಮ್ ಭಟ್, ಹೈದರ್ ಕೈರಂಗಳ, ಚಂದ್ರಶೇಖರ್ ಪಾತೂರ್, ಪತ್ರಕರ್ತರಾದ ಪುಷ್ಪರಾಜ ಬಿ.ಎನ್., ಪ್ರಕಾಶ್ ಮಂಜೇಶ್ವರ, ಸತೀಶ್ ಇರಾ, ಪಂಚಾಯಿತಿ ಸದಸ್ಯೆ ಸೆಮೀಮಾ ಬಾಳೆಪುಣಿ, ಇಸ್ಮಾಯಿಲ್ ಕಣಂತೂರು, ಬಡಿಲ ಹುಸೈನ್, ಸೆಲ್ಕೋ ತಂಡದ ರವೀನಾ, ವಾಣಿ ಲೋಕಯ್ಯ, ಅರುಣ ಬೀರಿಗ, ಗುಣವತಿ, ಚೇತನ್, ನವಸಾಕ್ಷರ ನಾರಾಯಣ, ಪ್ರೇರಕಿ ಮೋಹಿನಿ, ಮಂದಾರ ಒಕ್ಕೂಟದ ಜಯಾ ಮತ್ತು ಗೀತಾ ಮೊದಲಾದವರು ಭಾಗವಹಿಸಿದ್ದರು.
ಈ ಸಂದರ್ಭ ಏಳು ಮಂದಿ ನಿರುದ್ಯೋಗಿ ಯುವತಿಯರಿಗೆ ಸ್ಮೈಲ್ ಟ್ರಸ್ಟ್ ವತಿಯಿಂದ ಉಚಿತ ಹೊಲಿಗೆ ಯಂತ್ರ ವಿತರಿಸಲಾಯಿತು. ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕರಾದ ಶೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯ ಸಂವಾದ ಗೋಷ್ಠಿ ಮತ್ತು ನುಡಿನಮನ ಕಾರ್ಯಕ್ರಮ ನಿರ್ವಹಿಸಿದರು. ಸಂಜೀವಿನಿ ಸ್ವರಾಜ್ ಸಂತೆ-ಹಳ್ಳಿಮನೆ ಉತ್ಪನ್ನಗಳ ಪ್ರದರ್ಶನ ಮಾರಾಟ ವ್ಯವಸ್ಥೆ ಮಾಡಲಾಗಿತ್ತು.