ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಒಡಿಶಾ ರಾಜ್ಯದ ಅತಿ ಉದ್ದದ ಸೇತುವೆಯನ್ನು ಸೋಮವಾರ ಉದ್ಘಾಟನೆ ಮಾಡಿದರು.
ಮಹಾನದಿಗೆ ಕಟ್ಟಿದ ಈ ಸೇತುವೆಯು 3.4 ಕಿಲೋಮೀಟರ್ ಉದ್ದವಿದೆ. ಸಿಂಗನಾಥ ಪೀಠವನ್ನು ಕಟಕ್ ಜಿಲ್ಲೆಯ ಗೋಪಿನಾಥಪುರ ಬೈದೇಶ್ವರ್‌ಗೆ ಈ ಸೇತುವೆ ಸಂಪರ್ಕಿಸುತ್ತದೆ. ಅಲ್ಲಿನ ಜನರ 45 ಕಿಮೀ ಸುತ್ತು ಬಳಸು ದಾರಿಯನ್ನು ಇದು ನಿವಾರಿಸುತ್ತದೆ.