ಕೊಲ್ಕತ್ತಾ ಮಹಾನಗರ ಪಾಲಿಕೆಯ 144 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ಹಿಂದೆಂದೂ ಯಾವ ಪಕ್ಷವೂ ಕಾಣದ ಗೆಲುವನ್ನು ಕಾಣುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಹೇಳಿದ್ದಾರೆ.
88ರಲ್ಲಿ ಗೆಲುವು ದಾಖಲಿಸಿರುವ ಟಿಎಂಸಿ 44ರಲ್ಲಿ ಮುನ್ನಡೆಯಲ್ಲಿದೆ. ಬರೇ ಎಂಟು ಕ್ಷೇತ್ರಗಳಲ್ಲಿ ಮಾತ್ರ ಪ್ರತಿಪಕ್ಷಗಳು ಆರಂಭದಲ್ಲಿ ಮುನ್ನಡೆ ಸಾಧಿಸಿದ್ದವು. ಪ್ರಮುಖ ಪ್ರತಿ ಪಕ್ಷ ಬಿಜೆಪಿ ಒಂದು ಸ್ಥಾನ ಪಡೆದಿದೆ.