ಡಾ/ಕವಿತಾ ಡಿ ಸೋಜರವರ ನೇತೃತ್ವದಲ್ಲಿ ಅಡ್ಯಾರಿನಲ್ಲಿ ಯೋಗಿನಿ ಹಾಸ್ಪಿಕೇರ್ ಮಹಿಳೆಯರಿಗಾಗಿ ಮತ್ತು ಇತರ ವೈದ್ಯರುಗಳ  ನೇತೃತ್ವದಲ್ಲಿ ಉಚಿತ ವೈದ್ಯಕೀಯ ಶಿಬಿರ , ಉಚಿತ ರಕ್ತ ಪರೀಕ್ಷೆಗಳನ್ನು ಮತ್ತು ಜೌಷಧಿಗಳನ್ನು ನೀಡುವ ಮೂಲಕ ಯೋಗಿನಿ ಹಾಸ್ಪಿಕೇರ್ ಇದರ ಪ್ರಾರಂಭೋತ್ಸವವನ್ನು ಸ್ಥಳೀಯ ಸಾಮಾಜಿಕ ನಾಯಕರುಗಳಾದ ಪರಂಗಿಪೇಟೆಯ ಕಪುಚಿನ್ ಮೇಳದ ಸುಪೀರಿಯರ್ ಆದ ರೆ.ಫಾ.ಜೆರಾಲ್ಡ್ ಲೋಬೊ, ಸ್ಥಳೀಯ ಕಣ್ಣೂರು ಮಸೀದಿಯ ಖತೀಬರಾದ ಸಿ.ಎಂ.ಅನ್ಸಾರಿ ಫೈಜಿ ಮತ್ತು ಸ್ಥಳೀಯ ಉದ್ಯಮಿಗಳಾದ ಜಯರಾಂ ಶೇಖ, ಅಡ್ಯಾರು ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜೀನತ್, ಡಾ/ನೀತೇಶ್ ಭಂಡಾರಿ ಇವರೊಂದಿಗೆ ಯೋಗಿನಿ ಸಂಸ್ಥೆಯ ಮಾಲಕರಾದ ಡಾ/ಕವಿತಾ ಡಿ ಸೋಜ, ಶ್ರೀ ಐವನ್ ಡಿ ಸೋಜ ಇವರೊಂದಿಗೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಶಿಬಿರದಲ್ಲಿ 350ಕ್ಕೂ ಅಧಿಕ ಮಂದಿ ಸ್ಥಳೀಯರು ಭಾಗವಹಿಸಿ, ವಿವಿಧ ತಜ್ಞರುಗಳಾದ ಡಾ/ನಿತೇಶ್ ಭಂಡಾರಿ ಪೀಜಿಶಿಯನ್, ಡಾ/ವಿನ್ಮಾ ಎಚ್.ಶೆಟ್ಟಿ.,ಚರ್ಮರೋಗ,  ಡಾ/ಅನಿತಾ ಎಸ್.,ಸ್ತ್ರೀರೋಗ ತಜ್ಞರು, ಡಾ/ಅಕ್ಷತಾ ಜೆ.ಶೆಟ್ಟಿ ಮಕ್ಕಳ ತಜ್ಞರು, ಡಾ/ರೋಶೆಲ್ ಮೊಂತೆರೊ ಎಂ.ಡಿ., ಚರ್ಮರೋಗ ತಜ್ಞರು., ಡಾ/ಮಂಗಳಗೌರಿ ಎಂ.ಡಿ.,ಸ್ತ್ರೀರೋಗ ತಜ್ಞರು, ಡಾ/ತನುಶ್ರೀ ಕಾಮತ್, ಎಂ.ಡಿ., ಡಾ/ಶ್ರೀಪತ್ ಕಾಮತ್., ಕಣ್ಣಿನ ತಜ್ಞರು,  ಡಾ/ಜೆನಿಫರ್ ಮಿರಾಂದ ಎಂ.ಡಿ., ಫಿಜೀಶಿಯನ್ ತಜ್ಞರು, ಮುಂತಾದ ವೈದ್ಯರುಗಳ ತಂಡ ವಿವಿಧ ಕಾಯಿಲೆಗಳಲ್ಲಿ ಬಳಲುತ್ತಿರುವವರಿಗೆ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಲಹೆ ನೀಡಲಾಯಿತು. 100ಕ್ಕೂ ಅಧಿಕ ಮಂದಿಗೆ ಉಚಿತವಾಗಿ ರಕ್ತ ತಪಾಸಣೆಯ ಸೌಲಭ್ಯವನ್ನು ಏರ್ಪಡಿಸಲಾಯಿತು. 

ಈ ಸಂದರ್ಭದಲ್ಲಿ ಸ್ತನ ಕ್ಯಾನ್ಸರ್ ತಪಾಸಣೆ, ವಿಶೇಷವಾಗಿ ಗರ್ಭಕೋಶ ತಪಾಸಣೆ, ಸ್ತ್ರೀರೋಗದ ಕಾಯಿಲೆಗಳನ್ನು ತಪಾಸಣೆ ಮಾಡಲಾಯಿತು. ಪ್ರಾರಂಭದಲ್ಲಿ ಶ್ರೀ ಐವನ್ ಡಿ ಸೋಜರವರು ಸ್ವಾಗತಿಸಿದರು, ಡಾ/ಕವಿತಾ ಡಿ ಸೊಝರವರು ವಂದಿಸಿದರು ಮತ್ತು ಮೆಲ್ವಿನ್ ವಾಜ್ ಕಾರ್ಯಕ್ರಮವನ್ನು ನೆರವೇರಿಸಿದರು.