ಉಜಿರೆ: ನಿವೃತ್ತ ಗ್ರಾಮಕರಣಿಕ ಉಜಿರೆ ಗ್ರಾಮದ ನಿವಾಸಿ ಕೆ. ಚಂದ್ರಮೋಹನ ರೈ (80) ಭಾನುವಾರ ನಿಧನರಾದರು. ಅವರು ಶನಿವಾರ ಸಂಜೆ ವಾಕಿಂಗ್ ಹೋಗಿ ಮನೆಗೆ ಹಿಂದಿರುಗುವಾಗ ಬೈಕ್‍ಡಿಕ್ಕಿಯಾಗಿಉಜಿರೆಯಲ್ಲಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು.ಬಳಿಕ ಹೆಚ್ಚಿನಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರಗೆ ದಾಖಲಿಸಿದ್ದು ಅಲ್ಲಿ ಭಾನುವಾರ ನಿಧನರಾದರು.

ಉಜಿರೆ, ಬಂಟ್ವಾಳ, ಪುತ್ತೂರು, ಮಂಗಳೂರು ಮೊದಲಾದ ಊರುಗಳಲ್ಲಿ ಗ್ರಾಮಕರಣಿಕರಾಗಿ ಸುದೀರ್ಘ ಕಾಲ ಕರ್ತವ್ಯ ನಿರ್ವಹಿಸಿದ ಅವರು ನಿವೃತ್ತಿಯ ಬಳಿಕ ಉಜಿರೆಯಲ್ಲಿ ವಾಸ್ತವ್ಯಇದ್ದರು. ಸೇವಾ ಮನೋಭಾವ: ತನ್ನ ವೃತ್ತಿಯಜೊತೆಗೆಅವರು ಅನೇಕ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದು ಸಮಾಜ ಸೇವೆಯಲ್ಲಿ ನಿರತರಾಗಿದ್ದರು.

ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪುಸ್ತಕಗಳನ್ನು ಹಾಗೂ ಲೇಖನ ಸಾಮಾಗ್ರಿಗಳನ್ನು ಉಚಿತವಾಗಿ ನೀಡಿ ಪ್ರೋತ್ಸಾಹಿಸುತ್ತಿದ್ದರು. ಬಡವರ ಮದುವೆಗೂ ಆರ್ಥಿಕ ಸಹಾಯ, ಸಹಕಾರ ನೀಡುತ್ತಿದ್ದರು.ಯಕ್ಷಗಾನದ ವಿಶೇಷ ಅಭಿಮಾನಿಯಾಗಿದ್ದ ಅವರು ಉಜಿರೆಯಲ್ಲಿ ಬಯಲಾಟ ಪ್ರದರ್ಶನ, ಯಕ್ಷಗಾನ ತಾಳಮದ್ದಳೆಯ ಪ್ರಾಯೋಜಕರಾಗಿ ಸಹಕರಿಸಿದ್ದರು.

ಕರ್ನಾಟಕರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘ ಬೆಳ್ತಂಗಡಿ ತಾಲ್ಲೂಕು ಘಟಕದ ಕಾರ್ಯಕಾರಿ ಸಮಿತಿ ಸದಸ್ಯರಾಗಿಅವರು ಸೇವೆ ಮಾಡಿದ್ದಾರೆ. ಕಂದಾಯ ಇಲಾಖೆ ನಿಯಮಾವಳಿ ಬಗ್ಯೆ ವಿಶೇಷ ಪರಿಣತರಾಗಿದ್ದ ಅವರು ಇಲಾಖೆಯ ಸೌಲಭ್ಯ ಪಡೆಯುವ ಬಗ್ಯೆ ಮಾರ್ಗದರ್ಶನ, ಸಹಕಾರ ನೀಡಿ ಜನಾನುರಾಗಿಯಾಗಿದ್ದರು.ಅವರಿಗೆ ಪತ್ನಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುನಂದಾರೈ, ಒಬ್ಬ ಮಗ ಮತ್ತು ಒಬ್ಬಳು ಮಗಳು ಇದ್ದಾರೆ.