ಮುಂಬಯಿ, ಸೆ.04: ಉಪನಗರ ಜೋಗೇಶ್ವರಿ ಪೂರ್ವದ ಶ್ರೀ ಜಗದಂಬ ಕಾಲಭೈರವ ದೇವಸ್ಥಾನದ ಮಾಜಿ ವಿಶ್ವಸ್ಥ ಹಾಗೂ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದÀ ದಿವಂಗತ ಪ್ರಭಾಕರ್ ಬೋಳಾರ್ ಇವರ ಧರ್ಮಪತ್ನಿ ಸರಸ್ವತಿ ಬೋಳಾರ್ (63.) ಇಂದಿಲ್ಲಿ ಸೋಮವಾರ ಬೆಳಿಗ್ಗೆ ಅಲ್ಪಕಾಲದ ಅಸ್ವಸ್ಥತೆಯಿಂದ ನಗರದ ಖಾಸಾಗಿ ಆಸ್ಪತ್ರೆಯಲ್ಲಿ ದೈವಾಧೀನರಾದರು.  

ಮಂಗಳೂರು ಬೋಳಾರ ಮೂಲತಃ ಮೃತರು ಉದಯವಾಣಿ ದೈನಿಕದ (ಮುಂಬಯಿ) ನಿವೃತ್ತ ಬ್ಯೂರೋಚೀಫ್ ದಿ| ಕೆ.ಟಿ ವೇಣುಗೋಪಾಲ್ ಇವರ ಕಿರಿಯ ಸಹೋದರಿ ಆಗಿದ್ದು ಅನೇಕ ವರ್ಷಗಳಿಂದ ಮಹಾಕಾಳಿ ಕೇವ್ಸ್ ರೋಡ್ ಶೇರೆ ಪಂಜಾಬ್ ಸೊಸೈಟಿಯ ಭುವಿತಾ ಅಪಾರ್ಟ್‍ಮೆಂಟ್ ನಿವಾಸಿ ಆಗಿದ್ದು ಜಗದಂಬ ದೇವಸ್ಥಾನದ, ತೀಯಾ ಸಮಾಜ ಮುಂಬಯಿ ಇವುಗಳ ಸದಸ್ಯೆಯಾಗಿದ್ದು ಸಾಮಾಜಿಕ ಮತ್ತು ಧಾರ್ಮಿಕ ಕಾಳಜಿ ಹೊಂದಿ ಸಮಾಜ ಸೇವಕಿ ಎದೆಣಿಸಿದ್ದರು.

ಮೃತರು  ಎರಡು ಗಂಡು ಸೇರಿದಂತೆ ಬಂಧು-ಬಳಗವನ್ನು ಅಗಲಿದ್ದಾರೆ. ಸರಸ್ವತಿ ನಿಧನಕ್ಕೆ ಶ್ರೀ ಜಗದಂಬ ಕಾಲಭೈರವ ದೇವಸ್ಥಾನದ ಎಲ್ಲಾ ವಿಶ್ವಸ್ಥರು, ಪದಾಧಿಕಾರಿಗಳು, ಸದಸ್ಯರು ಸಂತಾಪ ಸೂಚಿಸಿ ಶ್ರದ್ಧಾಂಜಲಿ ಕೋರಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು (ಸೆ.04.) ಸಂಜೆ ಜೋಗೇಶ್ವರಿ ಪೂರ್ವದ ಕೇವ್ಸ್ ರಸ್ತೆಯಲ್ಲಿನ ಸ್ಮಶಾನಭೂಮಿಯಲ್ಲಿ ನೆರವೇರಿಸಲಾಯಿತು.