ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಫೋಟೋ ಸ್ಟುಡಿಯೋ ಮಾನಸ ರವಿ 

ತಂದೆ ಸೋಮನಾಥ, ತಾಯಿ ಮಹಿಷಮರ್ಧಿನಿ ಒಂದಾಗಿ ಮಣ್ಣು, ವಾಸ್ತು, ಖಂಡಗಳಲ್ಲಿ ಆವಿಷ್ಕಾರಗೊಂಡು ದೇವಾಲಯ ನಿರ್ಮಿಸಲ್ಪಟ್ಟಿದೆ. ದಾನ, ಧರ್ಮದ ಪ್ರತೀಕ ಹಿಂದೂ ಸಮಾಜ ತಂತ್ರ, ಪೂಜೆ, ಉತ್ಸವ, ಪುರಸ್ಕಾರಗಳಿಗೆ ಸಂಗ್ರಹವನ್ನು ವಿನಿಯೋಗ ಮಾಡಿದೆ. ರಾಜನೀತಿ, ರಾಜಧರ್ಮ ಸರಿಯಾಗಿದ್ದದ್ದರ ದ್ಯೋತಕ ಈ ಸುಂದರ ಸುಮನೋಹರ ದೇವಾಲಯ. ಹಿಂದೂ ಸಮಾಜ ಪುನರುತ್ಥಾನ ವಾಗಿದೆ. ಚೈತನ್ಯ ನೀಡುವ ದೇವರಲ್ಲಿ ಜನ ಸುಖವನ್ನು ಹೇಳಿ ಭಗವಂತನ ಕಷ್ಟವನ್ನು ಒಗ್ಗಟ್ಟಿನಿಂದ ಕೇಳಿದಾಗ ಎಲ್ಲವೂ ಸಾಧ್ಯ ಎಂದು ಮಾರ್ಚ್ 5 ರಂದು ಪುತ್ತೆ ಸೋಮನಾಥ ದೇವಾಲಯದ ತಿರುಮಲರಾಯ ಚೌಟ ವೇದಿಕೆಯಲ್ಲಿ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ನುಡಿದರು.ನುಡಿದರು.

ಭಗವಂತ ಯೋಚಿಸಿ ನೀಡಿದ ಮನುಜ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಲು ಎಲ್ಲವೂ ಅರ್ಪಿಸಿ ಮುಕ್ತಿ, ಸಾರ್ಥಕತೆ ಹೊಂದಿ. ನೀರು,  ಅನ್ನ, ಬೆಂಕಿಗಳು ಪವಿತ್ರಗೊಂಡು ತೀರ್ಥ, ಪ್ರಸಾದ, ಹೋಮ ಗಳಾಗುವಂತೆ ಸಂಸ್ಕಾರ ಬೆಳೆಸಿಕೊಳ್ಳಲು ಕೇಳಿಕೊಂಡವರು ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಯುವರಾಜ್ ಎಂ ರವರು. ರಾಷ್ಟ್ರೋತ್ಥಾನ ಸಂಸ್ಥೆಯ ಡಾ.ಅರುಣ್ ಉಳ್ಳಾಲ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಅನೂಚಾನವಾಗಿ ದುಡಿದ ಎಲ್ಲ ಕರಸೇವಕರೂ ಪ್ರಾತಃ ಸ್ಮರಣೀಯರು. ಧರ್ಮದ ವಿಚಾರ ತಿಳಿಸುವ ಶಿಕ್ಷಣ, ಅಷ್ಟಬಂಧ, ಪ್ರಾಣ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವಗಳ ಅರ್ಥ, ವಿವರಣೆ ಜನರಿಗೆ ತಿಳಿಯಲು ಶಾಲೆ, ಕಾಲೇಜುಗಳು ದೇವಾಲಯದ ಸಮೀಪ ಸ್ಥಾಪಿಸಲ್ಪಡಬೇಕು ಎಂದು ಆಶಿಸಿದರು. 

ಪುತ್ತಿಗೆ ಗುತ್ತು ಕೊಲಕಾಡಿ ನೀಲೇಶ್ ಶೆಟ್ಟಿ, ಎಂ ಸಿ ಎಸ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಚಂದ್ರಶೇಖರ ಎಂ, ನಾಗವರ್ಮ ಜೈನ್ ರನ್ನು ವಿಶೇಷವಾಗಿ ಸಂಮಾನಿಸಲಾಯಿತು.

ವೇದಿಕೆಯಲ್ಲಿ ಗುಡ್ಡೆಯಂಗಡಿ ಜನಾರ್ದನ ಪ್ರಭು, ಶ್ರೀನಿವಾಸ ಭಟ್, ಧರ್ಮಸ್ಥಳದ ಅನಿಲ್ ಕುಮಾರ್ ಎಸ್ ಎಸ್, ಮುರಂತಕೋಡಿಯ ವಾಸುದೇವ ಭಟ್, ಮೂಡುಬಿದಿರೆಯ ಉಮೇಶ್ ಪೈ, ಮಂಗಳೂರಿನ ಶಿವಪ್ರಸಾದ್ ಅಜಿಲ, ಶ್ರೀಧರ್ ಹಾಜರಿದ್ದರು. 

ಬೆಳಿಗ್ಗೆಯಿಂದ ತತ್ವ ಹೋಮ, ಚಂಡಿಕಾಯಾಗ, ಗಣಪತಿ ಹಾಗೂ ನರಸಿಂಹ ದೇವರ ಕಲಶಾಭಿಷೇಕ ಜರುಗಿತು. ಸಂಜೆ ವಿವಿಧ ಹೋಮ ಹವನಾದಿಗಳು ಜರುಗಿದವು. ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ಚೌಟರ ಅರಮನೆಯ ಕುಲದೀಪ್ ಎಂ, ಪತ್ನಿ ಸೌಮ್ಯ ರವರು ಬಹಳ ಭಕ್ತಿ ಪೂರ್ವಕ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಮಧ್ಯಾಹ್ನ ಶಿವ ಶಕ್ತಿ ಫ್ರೆಂಡ್ಸ್ ಬಳಗದ ಎಲ್ಲರನ್ನೂ, ಚಿಕ್ಕ ಮೇಳದ ಸರ್ವರನ್ನೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕುಲದೀಪ್ ಎಂ ಸಂಮಾನಿಸಿದರು. ನಾಳೆಯ ಬ್ರಹ್ಮಕಲಶೋತ್ಸವದ ಪೂರ್ವಭಾವಿ ತಯಾರಿಯಲ್ಲಿ ಋತ್ವಿಜರು ತಲ್ಲೀನರಾಗಿದ್ದರು. ವಿವಿಧ ಸಮಿತಿಗಳ ಉ‌ಸ್ತುವಾರಿಯನ್ನು  ಕಾಯರ್ ಪುಂಡು ಸುಭಾಷ್ ದೇವಾಡಿಗ, ಪುತ್ತಿಗೆಯ ದಯಾನಂದ ಶೆಟ್ಟಿ, ಸುನಿಲ್ ಕುಮಾರ್, ಸಂದೀಪ್ ಶೆಟ್ಟಿ, ದಯಾನಂದ ದೇವಾಡಿಗ, ಸಂಗೀತ ದಯಾನಂದ ದೇವಾಡಿಗ, ಪುತ್ತಿಗೆ ಗುತ್ತು ಕೊಲಕಾಡು ನೀಲಯ್ಯ ಶೆಟ್ಟಿ, ಅಂಬೂರಿಯ ಮಧ್ವರಾಜ್ ಶೆಟ್ಟಿ ಅವರು ಮುತುವರ್ಜಿ ವಹಿಸಿ ಸಹಕರಿಸುತ್ತಿದ್ದರು.

ವಿದುಷಿ ಪುತ್ತೂರು ಮಂಜುಳ ಸುಬ್ರಹ್ಮಣ್ಯ ರ ಭರತ ನಾಟ್ಯ, ಡಾ.ಸಹನಾ ಭಟ್ ತಂಡದ ನೃತ್ಯ ವೈಭವ, ಮೂಡುಬಿದಿರೆ ಯಕ್ಷ ನಿಧಿ ಶಿಕ್ಷಣ ಸಂಸ್ಥೆ ಮತ್ತು ಮಕ್ಕಳ ಮೇಳದ ದೊಂದಿ ಬೆಳಕಿನ ಸಹಸ್ರ ಲಿಂಗೋದ್ಭವ ಯಕ್ಷಗಾನ, ಮಂಗಳೂರು ಸನಾತನ ನಾಟ್ಯಾಲಯ, ಅರೆಹೊಳೆ ಪ್ರತಿಷ್ಠಾನ, ಕುಂದಾಪುರದ ನೃತ್ಯ ವಸಂತ, ಕೊಡವೂರು ನೃತ್ಯ ನಿಕೇತನದವರ ನೃತ್ಯೋಲ್ಲಾಸಗಳೆಲ್ಲವೂ ಭಕ್ತರ ಮನತಣಿಸಿದವು.