ಮಲ್ಪೆಯಲ್ಲಿ ಸಿಕ್ಕ 20 ಕಿಲೋ ತೂಕದ ಗೋಲ್ ಮೀನು ಇಲ್ಲವೇ ಸೀ ಗೋಲ್ಡ್ ಮೀನನ್ನು ಎಫ್ ವೈ ಜೆಡ್ ಫಿಶ್ ಕಂಪೆನಿಯ ಫಯಾಜ್ ಎಂಬವರು 1.8 ಲಕ್ಷ ರೂಪಾಯಿಗೆ ಹರಾಜಿನಲ್ಲಿ ಕೊಂಡರು.
ಶಾನ್ ರಾಜ್ ತೊಟ್ಟಂ ಎಂಬವರ ಬಲರಾಮ ಬೋಟ್ ಈ ಮೀನು ಹಿಡಿದಿತ್ತು. ಈ ಮೀನು ಕಿಲೋಗೆ ರೂ. 10,000 ಮೀರಿ ಬೆಲೆ ಇದೆ. 10 ಕಿಲೋ ಮೀರಿ ಸಿಗುವುದು ಕಡಿಮೆ. ಇದು 20 ಕಿಲೋ ಇತ್ತು. ಮುಂಬಯಿಗೆ ಹೋಯಿತು ಎಂದರು ಫಯಾಜ್.
ಅದೇ ದಿನ ಮಲ್ಪೆಯಲ್ಲಿ ನವೀನ್ ಸಾಲ್ಯಾನ್ ಎಂಬವರ ಬೋಟ್ ಗಾಳಕ್ಕೆ 30 ಕಿಲೋ ತೂಕದ ಕಾಂಡಾಯಿ ಮೀನು ಸಿಕ್ಕಿದೆ. ಕಿಲೋಗೆ ರೂ. 180ರಂತೆ ಅದು ಮಾರಾಟವಾಯಿತು.