ಮಂಗಳೂರು:- ನನ್ನದು ನನಗೆ ನಿನ್ನದು ನಿನಗೆ, ನನ್ನದು ನಿನಗೆ ನಿನ್ನದು‌ ನನಗೆ, ನನ್ನದು ನನಗೆ ನಿನ್ನದೂ ನನಗೆ, ನಿನ್ನದು ನಿನಗೆ ನನ್ನದೂ ನಿನಗೆ ಈ ನಾಲ್ಕು ಬಗೆಯವರಲ್ಲಿ ಶಕ್ತಿ ಶಿಕ್ಷಣ ಸಂಸ್ಥೆಯ ನಾಯ್ಕ್ ಕೊನೆಯ ಬಗೆಯವರು ಎಂದು ಪ್ರಾರ್ಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.




ಸಚಿವ ಸುರೇಶ್ ಕುಮಾರ್ ಶಕ್ತಿ ನಗರದ ಶಕ್ತಿ ವಸತಿ ಶಾಲೆಯ ಆವರಣದಲ್ಲಿ ರೇಶ್ಮಾ ಸ್ಮಾರಕ ಸಭಾಂಗಣವನ್ನು ಉದ್ಘಾಟನೆ ಮಾಡಿ ಫೆಬ್ರವರಿ 27ರಂದು ಮಾತನಾಡಿದರು. ಕೊರೋನಾದಿಂದ ಶಿಕ್ಷಣ ಕ್ಷೇತ್ರ ತತ್ತರಿಸಿದೆ. ಕಳೆದ ವರ್ಷ ಎಸ್ಎಸ್ ಎಲ್ ಸಿ ಪರೀಕ್ಷೆ ನಡೆಸಬೇಕೇ ಎಂಬ ಪ್ರಶ್ನೆ ಬಂದಾಗ ಕೊರೋನಾ ಕಾರಣಕ್ಕೆ ಪಾಸ್ ಮಾಡಿದ್ದಲ್ಲ, ಪರೀಕ್ಷೆ ಬರೆದು ಪಾಸಾಗಿದ್ದೇವೆ ಎನಲು ಪರೀಕ್ಷೆ ನಡೆಸಲೇ ಬೇಕು ಎಂದವರು ವಿದ್ಯಾರ್ಥಿಗಳು ಎಂದು ಅವರ ಬದ್ಧತೆ ಶ್ಲಾಘಿಸಿದರು. ಆನೇಕಲ್ ನ ಅನಕ್ಷರಸ್ಥ ಕೂಲಿ ಮಹಿಳೆಯ ಮಗ ಶಿಕ್ಷಕಿಯೊಬ್ನರಿಂದಾಗಿ ಶಾಲೆಗೆ ಸೇರಿ ಮೆಟ್ರಿಕ್, ಪಿಯು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿ ಈಗ ಮುಂಬಯಿ ಐಐಟಿಯಲ್ಲಿ ಓದುತ್ತಿರುವುದರ ಉದಾಹರಣೆ ನೀಡಿದ ಸಚಿವರು ಅರ್ಹತೆಯು ಗುರಿ ಮತ್ತು ಗುರು ಸಿದ್ದಿಯಿಂದ ಇದೆ ಎಂದು ಸುರೇಶ್ ಕುಮಾರ್  ಹೇಳಿದರು.






                            ಸಚಿವ ಸುರೇಶ್ ಕುಮಾರ್ ಅವರ ಉದ್ಘಾಟನಾ ಮಾತು

ಇದೇ ವೇಳೆ ಕರ್ನಾಟಕ ಸ್ವಿಮ್ಮಿಂಗ್ ಎಸೋಸಿಯೇಶನ್ ಅಧ್ಯಕ್ಷ ಮಾಜೀ ಪೋಲೀಸ್ ಅಧಿಕಾರಿ ಗೋಪಾಲ್ ಹೊಸೂರು ಸರೋಸ್ ಸ್ಮಾರಕ ಈಜುಕೊಳ ಉದ್ಘಾಟನೆ ಮಾಡಿದರು. ಅನಂತರ ಮಾತನಾಡಿದ ಅವರು ಮಂಗಳೂರಿನಷ್ಟು ಜೀವನೋತ್ಸಾಹದ ಜನರು ಕರ್ನಾಟಕದ ಬೇರೆಲ್ಲೂ ಇಲ್ಲಿ. ಇಲ್ಲಿಗೆ ಇನ್ನಷ್ಟು ಈಜುಕೊಳಗಳು ಬೇಕು. ಕಳೆದ  15 ವರುಷಗಳಲ್ಲಿ ಕರಾವಳಿಯಲ್ಲಿ 330 ಜನ ಪ್ರವಾಸಿ ವಿದ್ಯಾರ್ಥಿಗಳು ಈಜಲು ಹೋಗಿ ಮುಳುಗಿದ್ದಾರೆ. ಈಜು ತರಬೇತಿ ಬಹಳ ಮುಖ್ಯ. ಬೆಂಗಳೂರು ಕರ್ನಾಟಕ ದೇಶದ ಈಜು ಕಾಶಿ. ಕರ್ನಾಟಕವು ಸತತ ದೇಶ ಮಟ್ಟದಲ್ಲಿ ಓವರಾಲ್ ಚಾಂಪಿಯನ್ ಆಗುತ್ತಿದೆ. ಇಲ್ಲೂ ಅಂಥ ಚಾಂಪಿಯನ್ ಗಳು ಹೆಚ್ಚಲಿ ಎಂದು ಅವರು ಹೇಳಿದರು.


 

                           ಈಜುಕೊಳ ಉದ್ಘಾಟನೆ ಹಾಗೂ ಗೋಪಾಲ್ ಹೊಸೂರು ನುಡಿ ಸೇಸೆ

ಪಾಸಾಗುವುದು ಮುಖ್ಯ ನಿಜ, ಅದಕ್ಕಿಂತ ಮುಖ್ಯ ಜೀವನದಲ್ಲಿ ಪಾಸಾಗುವುದು. ಅಲ್ಲಿ ನಪಾಸಾದರೆ ಓದಿನಲ್ಲಿ ರಿಯಾಂಕ್ ಪಡೆದು ಫಲವಿಲ್ಲ, ಓದಿನಲ್ಲಿ ಬಾಲ್ಯ ಕಳೆದಹೋಗಬಾರದು ಎಂದು ಮುಖ್ಯ ಅತಿಥಿಯಾಗಿದ್ದ ಶಾಸಕ ವೇದವ್ಯಾಸ ಕಾಮತ್ ಹೇಳಿದರು. ಎಮ್ಮೆಕೆರೆಯಲ್ಲಿ 18 ಕೋಟಿ ವೆಚ್ಚದಲ್ಲಿ ಅಂತರರಾಷ್ಟ್ರೀಯ ಮಟ್ಟದ ಈಜುಕೊಳ ಆಗುತ್ತಿದೆ. 2,500 ಕೋಟಿ ರೂಪಾಯಿ ಅನುದಾನದಲ್ಲಿ ಮಂಗಳೂರು ಮಾದರಿ ನಗರ ಆಗಲಿದೆ. ಕೋರ್ಟಿನಲ್ಲಿ ಸ್ಮಾರ್ಟ್ ಸಿಟಿಗೆ ತಡೆ ಇನ್ನೇನು ವಜಾ ಆದ ಮೇಲೆ ಎಲ್ಲ ಕೆಲಸ ಮುಗಿಯಲಿದೆ ಎಂದು ಶಾಸಕರು ಹೇಳಿದರು.

                                 ವೇದವ್ಯಾಸ ಕಾಮತ್ ಅತಿಥಿ ಮಾತು

ಕರ್ನಾಟಕ ಬ್ಯಾಂಕಿನ ಸಿಇಓ ಮಹಾಬಲೇಶ್ವರ್ ಎಂ. ಎಸ್. ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು, ಅಧ್ಯಾಪಕರು, ಆಡಳಿತ ಮಂಡಳಿ, ಸಮಾಜ ಈ ನಾಲ್ಕು ಒಂದು ಯಶಸ್ವಿ ಶಿಕ್ಷಣ ಸಂಸ್ಥೆಯ ಆಧಾರ ಸ್ತಂಭಗಳು. ಈ ನಿಟ್ಟಿನಲ್ಲಿ ಶಕ್ತಿ ಶಿಕ್ಷಣ ಸಂಸ್ಥೆ ಸರ್ವ ಸಜ್ಜು ಯಶಸ್ವಿಯಾಗಿದೆ. ದೊಡ್ಡ ಕುರ್ಚಿ ಸಿಕ್ಕ ಮೇಲೆ ಈಗಿನ ವಿದ್ಯಾರ್ಥಿಗಳು ಹಿಂದೆ ನೆಲದಲ್ಲಿ ಕುಳಿತುದನ್ನು ಮರೆಯಬಾರದು. ಒಳ್ಳೆಯ ಕೆಲಸದಿಂದ ನಿಮ್ಮ ಹೆಸರು ಉಳಿಯುತ್ತದೆ. ಇಲ್ಲದಿದ್ದರೆ ನಿಮ್ಮ ಕುಟುಂಬದ ನಾಲ್ಕನೇ ತಲೆಮಾರಿನವರಿಗೆ ನೀವು ತಿಳಿದಿರುವುದಿಲ್ಲ ಎಂದು ಮಹಾಬಲೇಶ್ವರ ಅವರು ತಿಳಿಹೇಳಿದರು.

                                    ಮಹಾಬಲೇಶ್ವರರಿಂದ ಅಧ್ಯಕ್ಷೀಯ ನುಡಿ

                                      ಸಂಜಿತ್ ನಾಯ್ಕ್‌ ಸ್ವಾಗತ

ವಿದ್ಯಾ ಭಾರತಿಯ ಜಿ. ಆರ್. ಜಗದೀಶ್ ಮಾತನಾಡಿದರು. ಆರಂಭದಲ್ಲಿ ಸಂಜಿತ್ ನಾಯ್ಕ್ ಸ್ವಾಗತಿಸಿದರು. ರಮೇಶ್ ಪ್ರಾಸ್ತಾವಿಕವಾಗಿ ಸಂಸ್ಥೆಯ ಪರಿಚಯ ಮಾಡಿದರು. ಆರಂಭದಲ್ಲಿ ಪ್ರಾರ್ಥನೆ, ಅಂತ್ಯದಲ್ಲಿ ರಾಷ್ಟ್ರಗೀತೆ, ನಡುವೆ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ನಡೆಯಿತು. ಸ್ಥಳೀಯ ಕಾರ್ಪೊರೇಟರ್ ವನಿತಾ ಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದರು.

                                ಆರ್ಕಿಟೆಕ್ಚರ್  ದೀಪಕ್ ಡಿಸೋಜಾರಿಗೆ  ಸನ್ಮಾನ