ವಂದನೀಯ ಮಂಗಳೂರು ಧರ್ಮ ಪ್ರಾಂತ್ಯದ ಬಿಶಪ್ ಆದ ಪೀಟರ್ ಪೌಲ್ ಸಲ್ಡಾನಾ ಅವರು ನವೀಕರಣಗೊಂಡ ಕೊಂಕಣಿ ನಾಟಕ ಸಭಾದವರ ಡಾನ್ ಬಾಸ್ಕೋ ಹಾಲ್ ಉದ್ಘಾಟನೆ ಮಾಡಿದರು. ಆಶೀರ್ವಚನ ನೀಡಿದರು.
ಉದ್ಘಾಟನೆಯಲ್ಲಿ ಅಧ್ಯಕ್ಷ ರೆವೆರೆಂಡ್ ಮೆಲ್ವಿಲ್ ಪಿಂಟೋ ಮೊದಲಾದವರು ಸಹಕರಿಸಿದರು.
ಮಂಗಳೂರು ಸಾಂಸ್ಕೃತಿಕ ವೈವಿಧ್ಯತೆಯ ನಗರ. ಮಂಗಳೂರನ್ನು ಕರ್ನಾಟಕ ಸಂಸ್ಕೃತಿಗಳ ರಾಜಧಾನಿ ಎನ್ನಬಹುದು. ಇಲ್ಲಿ ಎಲ್ಲ ಭಾಷೆ, ಧರ್ಮಗಳವರು ಪರಸ್ಪರ ಗೌರವಿಸುತ್ತಾರೆ. ನನಗೂ ನಾನಿರುವ ಇಲಾಖೆಗೆ ಇಲ್ಲಿನ ಜನರ ಎಲ್ಲ ಬಗೆಯ ಸಹಕಾರ ದೊರೆಯಿತು. ಡಾನ್ ಬಾಸ್ಕೋ ಹಾಲ್ ಕಲಾವಿದರಿಂದಲೇ ಆದ ಸಂಸ್ಥೆ ಎಂಬುದು ಹೆಮ್ಮೆಯ ವಿಷಯ ಎಂದು ಕಮಿಶನರ್ ಶಶಿಕುಮಾರ್ ಹೇಳಿದರು.