ಭಾರತ ಅಂದರೆ ಬರೀ ದೇಶವಷ್ಟೇ ಅಲ್ಲ, ಅದೊಂದು ಶಕ್ತಿ

ಜೈ ಭಾರತ! ಎಂದಾಗ ನಾವು, ಉಕ್ಕಿ ಬರುವುದು ನಮ್ಮಲ್ಲಿ ದೇಶಭಕ್ತಿ! 

ಭಾರತ ಅಂದರೆ ಒಗ್ಗಟ್ಟು 

ಅತಿ ಶ್ರೇಷ್ಠ ಇದರ ಸಿರಿ - ಸಂಪತ್ತು. 

ಭಾರತ ಎಂದರೆ ಸ್ನೇಹ, ಪ್ರೀತಿ, ವಿಶ್ವಾಸ 

ಇದಕ್ಕೆ ಸಾಕ್ಷಿ ಮತ್ತು ಉದಾಹರಣೆ ನಮ್ಮ ಇತಿಹಾಸ! 

ನನ್ನ ಭಾರತ ಅಂದರೆ ನನಗೆ ಅಭಿಮಾನ 

ಇಲ್ಲಿ ಪ್ರತಿಯೊಬ್ಬ ಪ್ರಜೆಯೂ ಯಜಮಾನ! 

ನನ್ನ ಭಾರತ ಅಂದರೆ ಸಂಸ್ಕೃತಿ 

ಅತಿಥಿ ಸತ್ಕಾರವೇ ಭಾರತೀಯರ ವಿಶೇಷ ಪ್ರಕೃತಿ! 

ನನ್ನ ಭಾರತ ಅಂದರೆ ರೈತರು ಪಡುವ ಶ್ರಮ, ವೀರ ಯೋಧರು ಮಾಡುವ ತ್ಯಾಗ 

ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಇರುವುದು ಇವರ ಜಾಗ! 

ಇದು ನನ್ನ ನಾಡು, ನನ್ನ ಭಾರತ 

ಭಾರತೀಯಳಾಗಿ ಹುಟ್ಟಿದ ಕ್ಷಣವೇ ನನ್ನ ಜನ್ಮ ಸಾರ್ಥಕ!


-By Manasa G. Hegde