ಕಂಬನಿ ಜಾರಿದಾಗ,
ಕಾಣದಂತೆ ಯಾರಿಗೂ ಅಳಿಸಿಬಿಡು...
ತುಟಿ ಮೇಲೊಂದು ಹುಸಿ ನಗುವ
ಸುಮ್ಮನೆ ಅರಳಿಸಿಬಿಡು...
ಎದೆಯ ಇಬ್ಬನಿಯದು ,
ಹೋಗಲಿಬಿಡು ಕರಗಿ ಕರಗಿ ...
ಇಟ್ಟುಕೊಂಡರೆ ಮುಚ್ಚಿ ಒಳಗೆ,
ಉಕ್ಕಿ ಬರುವುದು ತಿರುಗಿ ತಿರುಗಿ....
ಎಣೆಯಿಲ್ಲದ ನೋವಿಗೆ ಸಾವು
ಬಂದಂತಾದರೂ ಮೊದ ಮೊದಲು...
ರೂಢಿಯಾಗುವುದು ಮುಂದೆ
ಅದರ ಜೊತೆಗೆ ಬದುಕಲು ...
- By ಶುಭ ನಾಗರಾಜ್ ಹೆಗಡೆ