ಕನ್ನಡ ನನ್ನ ಭಾಷೆ, ಕನ್ನಡಿಗರೆಲ್ಲ ಕನ್ನಡವನ್ನೇ 

ಮಾತನಾಡಬೇಕು ಎನ್ನುವುದು ನನ್ನ ಆಸೆ! 

ನಾನು ಕನ್ನಡತಿ ಎಂದಾಗ ನನಗಾಗುವುದು ಖುಷಿ, ಸಿಗುವುದು ಹೆಮ್ಮೆ

ಈ ಖುಷಿ ಸಿಗಲು ನೀವು ಪ್ರಯತ್ನಿಸಿ ನೋಡಿ ಒಮ್ಮೆ! 

ಮಾತಾಡಲು ಮಧುರ, ಕೇಳಲು ಹಿತಕರ, ನನ್ನ ಭಾಷೆ ಕನ್ನಡ 

ಇದು ನನ್ನ ಅಸ್ತಿತ್ವ, ನಾ ಹೋದಲ್ಲಿ ಇರುವುದು ನನ್ನ ಸಂಗಡ! 

ನನ್ನನ್ನು ಗುರುತಿಸಲು ಸಾಕು ನಾ ಆಡುವ ಭಾಷೆ ಕನ್ನಡ 

ಸುಂದರ, ಸುಮಧುರ ಇದರ ಒಂದೊಂದು ಪದ 

ಹಟ್ಟೋಣ ಬನ್ನಿ ಕನ್ನಡದ ಜ್ಯೋತಿ 

ಎಲ್ಲೆಲ್ಲೂ ಹರಡಲಿ ಇದರ ಬೆಳಕು, ಹರಡಲಿ ಇದರ ಪ್ರೀತಿ!-By Manasa G. Hegde