ಮೋಸವನು ಮಾಡುವರು ನಂಬಿಕೆಯ ಗಮನಿಸುತ

ಗಾಸಿಯದು ಮನಕದುವೆ ಜೀವನದಲೆ

ಸೋಸುತಲಿ  ಜನರನ್ನು ಸ್ನೇಹವನು ಮಾಡಿದರೆ

ಆಸನವು ನೀಡುವರು ಲಕ್ಷ್ಮಿ ದೇವಿ


ತಾಯಿಯನು ನೆನೆಯುತಲಿ ಪ್ರೀತಿಯನು ತೋರಿಸುತ

ಮಾಯೆಯನು ನಂಬದಲೆ ಬಾಳುತಿರಲು

ಕಾಯಕವ ಮಾಡುತಲೆ ನಡೆಯುತಿರು ಜೀವನದಿ

ಪಾಯಸದ ಸಿಹಿ ಇರಲಿ ಲಕ್ಷ್ಮಿ ದೇವಿ


ದಯೆಯನು ತೋರುವುದು ಬಡತನಕೆ ಸಹಿಯಿಹುದು

ಪಯಣದಲಿ ಗಮನವಿರೆ ಚಂದವದುವೆ

ಗಯಿಸುತಲೆ ನಡೆಯದಿರು ನಂಬಿಕೆಯು ಇರಬೇಕು

ಸಯಿಸುತಲೆ  ಬಾಳುತಿರು ಲಕ್ಷ್ಮಿ ದೇವಿ


ಚೆಂದದಲಿ  ನವಿಲುಗಳು ನಡೆಯುತಿರೆ ಸಂತಸವು

ಸಂದುವುದು ಸರಿಯಿರಲು ಗುಂಪಿನಲಿಯೆ 

ಅಂದದಲಿ  ಕುಣಿಯುವವು ಮನವನ್ನು ತಣಿಸುತಲಿ

ಸುಂದರದ  ನೋಟವದು ಲಕ್ಷ್ಮಿ ದೇವಿ


ಹೆಚ್. ಎಸ್. ಪ್ರತಿಮಾ ಹಾಸನ್.

ಸಾಹಿತಿ. ಶಿಕ್ಷಕಿ.ಹಾಸನ.