ಒಂಟಿ ಪಯಣ..

ತಣ್ಣನೆ ಬೀಸುವ

ತಂಗಾಳಿಯ ಪಿಸುನುಡಿಗಳ

ಸಾಂಗತ್ಯದ ಸಿಹಿ ಇಂಪನ

ಆತ್ಮೀ ಯತೆಯಿಂ ಆದರಿಸಿ

ಭುವಿಯ ಸಿಂಗರಿಸುವ

ಹಸಿರೆಲೆಗಳ ಆಲಿಂಗನ

ಆಗಾಗ ತನ್ನಿರುವಿಕೆಯ

ಚುರುಕ ಮುಟ್ಟಿಸುವ

ದಿನಕರನ ಚುಂಬನ

ಮೊಡ್ಡು ಬೆಟ್ಟ ಗುಡ್ಡಗಳ

ಪಚ್ಚಸಿರ ಸುಂದರಿಯ

ಕಾಡುವ ನೋಟದ ನಯನ

ಒಂಟಿ ಪಯಣ

ಕಂಡುಕೊಳ್ಳುವೆ

ನನ್ನಲಿಹ ನನ್ನ…

ಒಂಟಿ ಪಯಣ…

- ಮಾಗಿದ ಮನಸ್ಸು