ಉಡುಪಿ,(ಜನವರಿ 16) : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ರೋಟರಿ ಉಡುಪಿ ಇವರ ಸಹಯೋಗದೊಂದಿಗೆ ಶುಕ್ರವಾರ ಸಗ್ರಿ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿ, ಬಾಣಂತಿಯರು ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮ ಹಾಗೂ ಪೋಷಣ್ ಅಭಿಯಾನದಡಿ ಅನ್ನಪ್ರಾಶನ ಕಾರ್ಯಕ್ರಮ ನಡೆಯಿತು.

       ರೋಟರಿ ಅಧ್ಯಕ್ಷೆ ರಾಧಿಕ ಲಕ್ಷ್ಮಿ ನಾರಾಯಣ್ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಅಧ್ಯಕ್ಷೆ ಬಿ. ವಿ. ಲಕ್ಷ್ಮಿ ನಾರಾಯಣ ರೋಟರಿಯ ಕಾರ್ಯ ವೈಖರಿಯನ್ನು ವಿವರಿಸಿದರು. ಕಾರ್ಯದರ್ಶಿ ದೀಪಾ ಭಂಡಾರಿ ಗರ್ಭಿಣಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.

     ದಿನೇಶ್ ಭಂಡಾರಿ, ರೋಟರಿಯವರ ವತಿಯಿಂದ ಗರ್ಭಿಣಿ ಬಾಣಂತಿಯರಿಗೆ ಡ್ರೈ ಫ್ರೂಟ್ ಕಿಟ್ ಹಾಗೂ ಗೋದೋಡಿಯನ್ನು, ಮಕ್ಕಳಿಗೆ ಸ್ಟೀಲ್ ಬೌಲ್ ಮತ್ತು ಸ್ಪೂನ್, ಅಂಗನವಾಡಿ ಕೇಂದ್ರಕ್ಕೆ ಚಾಪೆ ಹಾಗೂ ಮಾಸ್ಕ್ ಅನ್ನು ವಿತರಿಸಿದರು.  ಸ್ಥಳೀಯ ನಗರಸಭಾ ಸದಸ್ಯೆ ಭಾರತಿ ಪ್ರಶಾಂತ್, ಶಾಲಾ ಮುಖ್ಯೋಪಾಧ್ಯಾಯಿನಿ ವಿಮಲ, ಬಾಲವಿಕಾಸ ಸಮಿತಿ ಅಧ್ಯಕ್ಷೆ ವಾರಿಜ ಇವರು ಸ್ಥಳೀಯ ದಾನಿಗಳಿಂದ ನಿರ್ಮಾಣಗೊಂಡ ಹೆಚ್ಚುವರಿ ಕೊಠಡಿಯನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಕರ‍್ಯಕರ್ತೆಯರಾದ ಪ್ರಮೋದ, ಸುಮಲತ, ಸಹಾಯಕಿ ಸಹನ, ಮೇಲ್ವಿಚಾರಕಿ ಶಾಂತಿ ಪ್ರಭು, ಶಾಲಾ ಶಿಕ್ಷಕರು, ಆಶಾಕರ‍್ಯಕರ್ತೆಯರು, ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರು ಉಪಸ್ಥಿತರಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ ಸ್ವಾಗತಿಸಿ, ಪೋಷಣ್ ಅಭಿಯಾನ್ ಕಾರ್ಯಕ್ರಮದ ಮಹತ್ವ ಹಾಗೂ ಅನ್ನಪ್ರಾಶನ ಕಾರ್ಯಕ್ರಮ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ದಾನಿಗಳನ್ನು ಗೌರವಿಸಲಾಯಿತು.