ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿ ಪಕ್ಷಗಳೆಲ್ಲ ಸೇರಿ ಜಂಟಿ ಅಭ್ಯರ್ಥಿಯನ್ನು ನಿಲ್ಲಿಸಲು ಪ್ರಯತ್ನ ನಡೆದಿದೆ.

ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರು ಈಗಾಗಲೇ ಹಲವು ಪ್ರತಿ ಪಕ್ಷ ನಾಯಕರನ್ನು ಭೇಟಿ ಆಗಿದ್ದಾರೆ. ಜನತಾದ ದೇವೇಗೌಡರು, ಸಮಾಜವಾದ ಪಕ್ಷದ ಯಾದವ್, ಟಿಎಂಸಿಯ ಮಮತಾ ಬ್ಯಾನರ್ಜಿ, ಶಿವಸೇನೆಯ ಉದ್ಧವ್ ಠಾಕ್ರೆ, ಡಿಎಂಕೆಯ ಸ್ಟಾಲಿನ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೊದಲಾದವರನ್ನು ಈಗಾಗಲೇ ರಾವ್ ಸಂಪರ್ಕಿಸಿದ್ದಾರೆ. ಎಲ್ಲರ ನೇರ ಭೇಟಿ ಮತ್ತು ಸಂಯುಕ್ತ ಸಭೆಯೊಂದನ್ನು ನಡೆಸಲು ಅವರು ಪ್ರಯತ್ನ ನಡೆಸಿದ್ದಾರೆ.