ಪ್ರಧಾನಿ ಭದ್ರತಾ ಲೋಪ ಸಂಬಂಧ ನಿವೃತ್ತ ನ್ಯಾಯಾಧೀಶರ ನೇತೃತ್ವದ ತನಿಖಾ ಸಮಿತಿ ರಚಿಸುವುದಾಗಿ ಸುಪ್ರೀಂ ಕೋರ್ಟು ಹೇಳಿತು.

ಮುಖ್ಯ ನ್ಯಾಯಾಧೀಶರಾದ ಎನ್. ವಿ. ರಮಣ, ಜಸ್ಟಿಸ್‌ಗಳಾದ ಸೂರ್ಯಕಾಂತ್, ಹಿಮಾ ಕೊಹ್ಲಿ ಅವರಿದ್ದ ಪೀಠವು ಬೇರೆಲ್ಲ ತನಿಖೆಗಳನ್ನು ನಿಲ್ಲಿಸಲು ಹೇಳಿತು. ಪಂಜಾಬ್ ಸರಕಾರ ರಚಿಸಿದ್ದ ತನಿಖಾ ಸಮಿತಿಯನ್ನು ಸಹ ಬರ್ಖಾಸ್ತು ಗೊಳಿಸಿತು.