ಪಠ್ಯ ಪುಸ್ತಕ ಸಮಿತಿಯಾಗಲಿ ಅದರ ಶಿಫಾರಸು ಪಾಠಗಳಾಗಲಿ ಸಾಮಾಜಿಕ ನ್ಯಾಯ ಹೊಂದಿಲ್ಲ. ಸಮಿತಿಯ 7 ಜನರಲ್ಲಿ 6 ಮಂದಿ ಬ್ರಾಹ್ಮಣರು. ಅದು ಶಿಫಾರಸು ಮಾಡಿರುವ 10 ಪಾದಗಳಲ್ಲಿ 9 ಬ್ರಾಹ್ಮಣರಿಗೆ ಸಂಬಂಧಿಸಿದ್ದು ಎಂದು ಸಾಹಿತಿ ಎಸ್. ಜಿ. ಸಿದ್ದರಾಮಯ್ಯ ಖಂಡಿಸಿದರು.

ಪಠ್ಯ ಪುಸ್ತಕ ಸಮಿತಿಯ ರೋಹಿತ್ ಚಕ್ರತೀರ್ಥ ಹೊರಗಟ್ಟಿ ಸಮಿತಿಯನ್ನು ವಿಸರ್ಜಿಸಬೇಕು. ಸಾಹಿತಿ, ಚಿಂತಕರ ಸಭೆಯು ಬೆಂಗಳೂರಿನಲ್ಲಿ ಸೇರಿ ಮೇ 31ರಂದು‌ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನ ತೆಗೆದುಕೊಂಡರು.

ವಾಸುದೇವ ರೆಡ್ಡಿ, ಶ್ರೀನಾಥ್ ಪೂಜಾರಿ, ನರಸಿಂಹಯ್ಯ, ಅಮರೇಶ ಮೊದಲಾದವರು ಪಾಲ್ಗೊಂಡರು.