545 ಮಂದಿ ಪಿಎಸ್ಐಗಳ ನೇಮಕವಾಗಿತ್ತು. ಪರೀಕ್ಷೆಯಲ್ಲಿ ಒಂದಕ್ಕಿಂತ ಹೆಚ್ಚು ಕಡೆ ಅಕ್ರಮ ನಡೆದಿರುವುದು ಸಾಬೀತಾಗಿರುವುದರಿಂದ ಆ ನೇಮಕಾತಿ ರದ್ದು ಮಾಡಲಾಯಿತು ಎಂದು ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರು ವಿಕಾಸ ಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು.
54,289 ಮಂದಿ ಪರೀಕ್ಷೆ ಬರೆದಿದ್ದು 545 ಮಂದಿ ಪಾಸಾಗಿದ್ದರು. 54,289 ಜನರಲ್ಲಿ ಆರೋಪ ಹೊತ್ತವರ ಹೊರತಾಗಿ ಬೇರೆ ಎಲ್ಲರೂ ಮತ್ತೆ ಪರೀಕ್ಷೆಗೆ ಹಾಜರಾಗಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಈ ನಡುವೆ ಪೂನಾದಲ್ಲಿ ಅಡಗಿದ್ದ ಪ್ರಮುಖ ಆರೋಪಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ಅರ್ಚನಾ ದಿವ್ಯಾ, ಸುನಂದಾ, ಚಾಲಕ ಸದ್ದಾಂರನ್ನು ಬಂಧಿಸಿ ರಾಜ್ಯಕ್ಕೆ ತರಲಾಯಿತು.