ಎರಡು ದಿನ ಜಿಲ್ಲೆಯಲ್ಲಿ ಭಾರೀ ಮಳೆ ಎಂದು ಕರಾವಳಿಯಲ್ಲಿ ಆರೇಂಜ್ ಅಲರ್ಟ್ ಘೋಷಿಸಿದ್ದು ಸುಳ್ಳಾಗದೆ ಜಿಲ್ಲೆಯೆಲ್ಲೆಡೆ ಆರಜ್ ರಸದಂತೆ ಮಳೆ ನೀರು ತುಂಬಿಕೊಂಡಿದೆ.
ಗುರುವಾರ ಜೂನ್ 30ರ ಬೆಳಿಗ್ಗೆ ಎಂಟೂವರೆಯಿಂದ ಒಂಬತ್ತು ಗಂಟೆಯ ನಡುವೆ ಅರ್ಧ ಗಂಟೆಯಲ್ಲಿ ಮಂಗಳೂರು ನಗರದಲ್ಲಿ 6 ಸೆಂಟಿಮೀಟರ್ ಮಳೆ ಬಂದಿದೆ.
ಪಾವೂರುನಲ್ಲಿ 6.4 ಸೆಂಟಿಮೀಟರ್ ಮಳೆ ಅರ್ಧ ಗಂಟೆಯಲ್ಲಿ ಬಂದಿದೆ.
ಪಡೀಲ್ ರೈಲ್ವೆ ಮೇಲ್ಸೇತುವೆಯ ಕೆಳಗೆ ಐದು ಅಡಿವರೆಗೂ ನೀರು ನಿಂತುದರಿಂದ ವಾಹನಗಳು ಸಾಲುಗಟ್ಟಿ ಇರುವೆ ನಡಿಗೆಯಾದವು.
ಕಳೆದ 24 ಗಂಟೆಯಲ್ಲಿ ಉಡುಪಿ ಜಿಲ್ಲೆಯ ನಾಡಾದಲ್ಲಿ 24.7 ಸೆಂಟಿಮೀಟರ್ ಮಳೆ ಬಿದ್ದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಾವಳ್ಳಿಯಲ್ಲಿ 20.4 ಸೆಂಟಿಮೀಟರ್ ಮಳೆ ಸುರಿದಿದೆ.
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕದ ಮರವೂರು ಸೇತುವೆ ಬಳಿ ಬಿರುಕು ಕಾಣಿಸಿಕೊಂಡ ಕಾರಣ ಎಚ್ಚರಿಕೆ ನೀಡಲಾಗಿದೆ.
ಮಳೆ ಅಧಿಕ ಇರುವಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಶಾಲೆಗೆ ರಜೆ ಘೋಷಣೆ ಮಾಡಿದರು. ಶಾಲಾಡಳಿತ ತೀರ್ಮಾನ ತೆಗೆದುಕೊಳ್ಳುವಂತೆಯೂ ತಿಳಿಸಿದ್ದಾರೆ.