ಮಂಗಳೂರು: ನಗರದ ಸಂತ ಆಗ್ನೇಸ್ ಪದವಿ ಪೂರ್ವಕಾಲೇಜಿನಲ್ಲಿ ದಿನಾಂಕ 29-11-2023ರಂದು ವಾರ್ಷಿಕ ಕ್ರೀಡೋತ್ಸವ ನಡೆಯಿತು. ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷೆ ಲಿಲ್ಲಿ ಪಾೈಸ್‍ರವರು ಪಥಸಂಚಲನದ ಗೌರವ ಸ್ವೀಕಾರ ಹಾಗೂ ಕಾಲೇಜು ಧ್ವಜಾರೋಹಣದ ನಂತರ ಮಾತನಾಡಿ ಕಾಲೇಜು ಕ್ರೀಡೋತ್ಸವದ ಪಥಸಂಚಲನದ ಶಿಸ್ತನ್ನು ಪ್ರಶಂಸಿಸಿ, ಕ್ರೀಡೆಯಲ್ಲಿ ‘ಅಹಂ’ ಸಲ್ಲದು, ಸ್ಪರ್ಧಾತ್ಮಕ ಕ್ರೀಡಾ ಮನೋಭಾವ ಇರಬೇಕೆಂದು ಹೇಳಿದರು. 

ಕ್ರೀಡಾ ಕಾರ್ಯದರ್ಶಿ ಅನನ್ಯ ಅಶೋಕನ್ ಪ್ರತಿಜ್ಞಾ ವಿಧಿ ನೆರವೇರಿಸಿ, ಅತಿಥಿವರ್ಯರಿಂದ ಕ್ರೀಡಾಜ್ಯೋತಿಯ ಮರ್ಯಾದೆ ಪಡೆದು ಬೆಳಗಿಸಿದರು. ಕ್ರೀಡೋತ್ಸವದ ನಿಮಿತ್ತ ಹಲವಾರು ಒಳಾಂಗಣ ಹೊರಾಂಗಣ ಆಟಗಳನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕ-ಶಿಕ್ಷಕೇತರರಿಗೆ ಹಮ್ಮಿಕೊಳ್ಳಲಾಗಿತ್ತು. ಉದ್ದಜಿಗಿತ, ಎತ್ತರಜಿಗಿತ, ಗುಂಡುಎಸೆತ, ಚಕ್ರಎಸೆತ, ಈಟಿಎಸೆತ, ರಿಲೆ, ಓಟ– ಹೀಗೆ ಹಲವು ರೀತಿಯ ಕ್ರೀಡೆಗಳು ನಡೆದು, ಕಾಲೇಜಿನ ಪ್ರಥಮ ಪಿಸಿಎಂಸಿ ‘ಡಿ’ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡರು. ಹಾಗೆಯೇ ವೈಯಕ್ತಿಕ ವಿಭಾಗದಲ್ಲಿ ಕು. ರಿಶಾಸಮಗ್ರ ಪ್ರಶಸ್ತಿ ಪಡೆದು ಚ್ಯಾಂಪಿಯನ್ ಆಗಿ ಹೊರಹೊಮ್ಮಿದರು.

ಕ್ರೀಡೋತ್ಸವದಲ್ಲಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಭಗಿನಿ ಡಾ. ಮರಿಯರೂಪಾ ಎ.ಸಿ, ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ನೋರಿನ್ ಡಿ’ಸೋಜಾ ಎ.ಸಿ, ಉಪ ಪ್ರಾಂಶುಪಾಲರಾದ ಭಗಿನಿ ಜಾನೆಟ್ ಸಿಕ್ವೇರಾ ಎ.ಸಿ, ದೈಹಿಕ ಶಿಕ್ಷಣ ಉಪನ್ಯಾಸಕಿ ಜಯಶ್ರೀ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಜೋಸ್ಲಿನ್ ಲೋಬೊ, ಇತರಸದಸ್ಯರು, ವಲಯದ ಶಾಲಾ ಕಾಲೇಜಿನ ಮುಖ್ಯಸ್ಥರು, ಶಿಕ್ಷಕ-ಶಿಕ್ಷಕೇತರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಉಪನ್ಯಾಸಕಿ ಲಿಖಿತ ಸ್ವಾಗತಿಸಿ, ಪ್ರಣಮ್ಯದೇಚಮ್ಮ ವಂದನಾರ್ಪಣೆಗೈದು, ವಿದ್ಯಾರ್ಥಿನಿ ಹನಾ ಮರಿಯಂ ಹಾಗೂ ಅಮೇಖ ಬೇಡಿ ನಿರ್ವಹಿಸಿದರು.