ಸಂತ ಫಿಲೋಮಿನಾ ಕಾಲೇಜಿನ ವ್ಯವಹಾರ ಅಧ್ಯಯನ ವಿಭಾಗವು ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಒಂದಾದ ಬಾಷ್ ಕಂಪೆನಿಯ ಜತೆ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗಾಗಿ ಕೈಗಾರಿಕೆ- ಶೈಕ್ಷಣಿಕ ಸಹಯೋಗದ ಒಡಂಬಡಿಕೆಯನ್ನು ಇತ್ತೀಚೆಗೆ ಮಾಡಿಕೊಂಡಿತು. ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಭಿಷೇಕ್ ಸುವರ್ಣ ಇವರು ಬಾಷ್ ಕಂಪೆನಿಯಲ್ಲಿ ತರಬೇತಿಯನ್ನು ಪಡೆದುಕೊಂಡು ಬಂದಿದ್ದು ಬಾಷ್ ಕಂಪೆನಿಯ ಪರವಾಗಿ ವಿದ್ಯಾರ್ಥಿಗಳಿಗೆ ಯುಕ್ತತರಬೇತಿ ನೀಡಲಿದ್ದಾರೆಂದು ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ| ರಾಧಾಕೃಷ್ಣ ಗೌಡ ತಿಳಿಸಿದರು.
ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸುವುದಕ್ಕಾಗಿ ಕೈಗಾರಿಕೆ - ಶಿಕ್ಷಣ ಸಹಯೋಗ ಎಂಬ ತರಬೇತಿ ಕಾರ್ಯಕ್ರಮವನ್ನು ಬಾಷ್ ಕಂಪೆನಿಯು 2019ರಲ್ಲಿ ಅಭಿವೃದ್ಧಿ ಪಡಿಸಿತು. ಈ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿತರಬೇತಿ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದ ಡಾ| ರಾಧಾಕೃಷ್ಣ ಗೌಡ ಅವರು, ಕೈಗಾರಿಕೆ- ಶಿಕ್ಷಣ, ಸಮಾಜ ಸೇವಾ ವೃತ್ತಿಪರರನ್ನು ಅಭಿವೃದ್ಧಿ ಪಡಿಸುವುದು, ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಅಗತ್ಯವಾದ ಕೌಶಲ್ಯದ ಅಭಿವೃದ್ದಿಯನ್ನು ಮಾಡುವುದು, ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳೊಂದಿಗೆ ಕ್ಯಾಂಪಸ್ ಪ್ಲೇಸ್ ಮೆಂಟ್ ಬಗೆಗೆ ವಿಭಾಗವು ಹೆಚ್ಚಿನ ಗಮನ ನೀಡಲಿದೆ ಎಂದು ತಿಳಿಸಿದ್ದಾರೆ.