ಸರಳ ವಾಸ್ತು ಸಂಸ್ಥೆಯ ಚಂದ್ರಶೇಖರ್ ಅವರನ್ನು ಹುಬ್ಬಳ್ಳಿಯಲ್ಲಿ ಕೊಲೆ ಮಾಡಿ ಬಾಗಲಕೋಟೆಯತ್ತ ಪರಾರಿಯಾಗುತ್ತಿದ್ದ ಕೊಲೆಗಾರರನ್ನು ಪೋಲೀಸರು ರಾಮದುರ್ಗದ ಬಳಿ ಬೆನ್ನಟ್ಟಿ ಬಂಧಿಸಿದ್ದಾರೆ.
ಬಂಧಿತರು ಸರಳ ವಾಸ್ತು ಸಂಸ್ಥೆಯ ಮಾಜೀ ಕೆಲಸಗಾರರು. ಮಂಜುನಾಥ್ ಮತ್ತು ಮಹಾಂತೇಶ್ ಶಿರೂರು ಬಂಧಿತರು. ಹುಬ್ಬಳ್ಳಿ ಉಣಕಲ್‌ನ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ತಂಗಿದ್ದ ಚಂದ್ರಶೇಖರರನ್ನು ಮತ್ತೆ ಕಾಲು ಹಿಡಿಯಲು ಬಂದವರಂತೆ ಬಂದು ಮಂಗಳವಾರ ಇರಿದು ಕೊಲೆ ಮಾಡಿದ್ದರು.