ಬ್ರಿಟನ್ನಿನ ಹಣಕಾಸು ಮಂತ್ರಿ ರಿಷಿ ಸುನಕ್ ಮತ್ತು ಆರೋಗ್ಯ ಕಾರ್ಯದರ್ಶಿ ಸಜ್ಜಿದ್ ಜಾವೇದ್ ರಾಜೀನಾಮೆ ನೀಡಿದ ಕಾರಣ ಬೋರಿಸ್ ಜಾನ್ಸನ್ ಸರಕಾರಕ್ಕೆ ಹಿನ್ನಡೆ ಆಗಿದೆ.
ಕಳಂಕಿತ ಸಂಸದರೊಬ್ಬರನ್ನು ಉನ್ನತ ಹುದ್ದೆಯೊಂದಕ್ಕೆ ನೇಮಿಸುವ ಒತ್ತಡದಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್ ಸಿಲುಕಿರುವುದು ಮಂತ್ರಿ ಮಂಡಲದಲ್ಲಿ ವಿವಾದಕ್ಕೆ ಕಾರಣವಾಗಿತ್ತು.
2015ರಲ್ಲಿ ಸಂಸದರಾದ ರಿಷಿ ಸುನಕ್ ಎರಡನೆಯ ಬಾರಿ ಗೆದ್ದು 2020ರಲ್ಲಿ ಸಚಿವರಾಗಿದ್ದರು. ರಿಷಿ ಇನ್ಫೋಸಿಸ್‌ನ ಸುಧಾ ನಾರಾಯಣ ಮೂರ್ತಿಯವರ ಅಳಿಯ. ಇದು ನನ್ನ ಕೊನೆಯ ರಾಜಕೀಯ ಹುದ್ದೆ ಎಂದು ರಿಷಿ ಟ್ವೀಟ್ ಮಾಡಿದ್ದಾರೆ.