ಮಂಗಳೂರು, ಜು 05: ದೇಶದ ಎಲ್ಲೆಡೆ ಕಾಂಗ್ರೆಸ್ ಪಕ್ಷವು ಯಶಸ್ವಿಯಾಗಿ ನಡೆಸಿದೆ. ಈಗ ಜಿಲ್ಲೆಯಲ್ಲೂ ನಡೆಸಬೇಕೆಂದು ತೀರ್ಮಾನ ಮಾಡಿದ್ದೇವೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ ಅವರು ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.

ನನ್ನ ತಂದೆ ಸಾರೇಕೊಪ್ಪ ಬಂಗಾರಪ್ಪನವರು ನಾನಾ ಪಕ್ಷ ಕಟ್ಟಿದವರು ಮತ್ತು ನಾನಾ ಪಕ್ಷಗಳಲ್ಲಿ ಇದ್ದವರು. ಬಂಗಾರಪ್ಪ ನವರ ಅಭಿಮಾನಿಗಳು ಕರಾವಳಿ ಮತ್ತು ತುಳುನಾಡಿನಲ್ಲಿ ತುಂಬ ಜನರಿದ್ದಾರೆ. ಆದರೆ ಅವರು ‌ಬಂಗಾರಪ್ಪನವರ ಹಿಂದೆ ಬಿಜೆಪಿಗೆ ಹೋದವರು ವಾಪಾಸು ಬಂದಿಲ್ಲ. ಅವರನ್ನು ಮತ್ತೆ ಸಂಪಾದಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ಮಧು ಬಂಗಾರಪ್ಪ ಹೇಳಿದರು.

ಭಾರತೀಯ ಜನತಾ ಪಕ್ಷವನ್ನು ಬ್ರಿಟಿಷ್ ಜನತಾ ಪಕ್ಷ ಎಂದು ಹೇಳಬಹುದು. ಅಂಬೇಡ್ಕರ್‌ರ ಸಂವಿಧಾನ ಬದಲಿಸುವ, ಪಠ್ಯಗಳಲ್ಲಿ ಇತಿಹಾಸ ತಿರುಚುವ ಬಿಜೆಪಿ ಕಾರ್ಯಕ್ರಮಗಳು ಜ‌ನದ್ರೋಹಿ ಎಂದು ಮಧು ಅವರು ಹೇಳಿದರು.

ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ರೈತರಿಗೆ ಉಚಿತ ವಿದ್ಯುತ್ ನೀಡಿದರು. ಆಶ್ರಯ, ಆರಾಧನಾ ಇತ್ಯಾದಿ ಕಾರ್ಯಕ್ರಮಗಳು, ಭೂ ಸುಧಾರಣೆ. ಹೀಗೆ ಕಾಂಗ್ರೆಸ್ ಕೊಡುಗೆ ನೂರಾರು. ಬಿಜೆಪಿಯದು ಇಂತಾ ಕೊಡುಗೆಗಳೇನೂ ಇದ್ದರೆ ಅದು‌ ಸೊನ್ನೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ನಾರಾಯಣ ಗುರುಗಳ ಜಯಂತಿ ಆರಂಭಿಸಿದರು. ಅದನ್ನು ವಿಧಾನ ಸಭೆಯಲ್ಲಿ ಎತ್ತಿ ಹೇಳಿದವನು ನಾನು ಎಂದು ಮಧು ಬಂಗಾರಪ್ಪ ಹೇಳಿದರು.

ನಿನ್ನೆ ನಾಟಕದಲ್ಲಿ ಹೋಗಿ ಸಂಘ ಪರಿವಾರದವರು ಗಲಾಟೆ ಮಾಡಿ ಕಲೆಗೆ ಅಪಚಾರ ಮಾಡಿದ್ದಾರೆ. ಅದನ್ನು ನಾನು ಖಂಡಿಸುತ್ತೇನೆ. ಬಿಜೆಪಿ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಆ ಜನವಿರೋಧಿ ಸರಕಾರ ಇಳಿಸಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ತೆರಬೇಕಾಗಿದೆ. ಅ ಸಂಘಟನೆಯಲ್ಲಿ ತೊಡಗಿದ್ದೇವೆ. ಬಿಜೆಪಿಯದು ಇತರ ಧಾರ್ಮಿಕ ದಮನ ನೀತಿ. ಧ್ವನಿವರ್ಧಕ ಇತ್ಯಾದಿ ತೆಗೆಸಿದ್ದರಲ್ಲಿ ಅದನ್ನು ಕಾಣಬಹುದು. ಧಾರ್ಮಿಕ ಸಾಮರಸ್ಯದ ದಕ್ಷಿಣ ಕನ್ನಡ ಜಿಲ್ಲೆಯು ಬಿಜೆಪಿಯಿಂದ ಕುಲಗೆಟ್ಟಿದೆ. ಅದನ್ನು ಸರಿಪಡಿಸುವ ವಿಶ್ವಾಸ ನಮ್ಮದು ಎಂದು ಮಧು ಬಂಗಾರಪ್ಪ ಪ್ರತಿಪಾದಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಮಾಜೀ ಶಾಸಕ ಜೆ. ಆರ್. ಲೋಬೋ, ಡಿಕೆಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಶಶಿಧರ ಹೆಗ್ಡೆ, ಪ್ರಕಾಶ್ ಸಾಲಿಯಾನ್, ಸದ್ಯ ಜಿಲ್ಲಾ ಚುನಾವಣೆಯ ಡಿಆರ್‌ಓ ಆದ ಜಯಚಂದ್ರನ್, ಟಿ. ಕೆ. ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.

ಬಿಜೆಪಿಯದು ಅನ್ಯಮತ ದಮನ ರಾಜಕೀಯ, ಜನಪರ ಕಾಂಗ್ರೆಸ್ ತರುವುದು ನಮ್ಮ ಜವಾಬ್ದಾರಿ- ಮಧು ಬಂಗಾರಪ್ಪ

ಬಿಜಿನೆಸ್‌ಗೆ ಬಂದ ಬಿಜೆಪಿಯು ರಾಜಕೀಯವನ್ನು ಬಿಜಿನೆಸ್ ಮಾಡಿದೆ. ಮಹಾರಾಷ್ಟ್ರದಲ್ಲಿ ಈಗ ಬಂದಿರುವುದು ಬಿಜಿನೆಸ್ ಪಾಲುದಾರಿಕೆಯ ಆಡಳಿತ ಅಷ್ಟೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.