ಕರ್ನಾಟಕದ ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಐಎಸ್‌ಡಿ- ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಅಮೃತ್ ಪೌಲ್‌ರನ್ನು ಬಂಧಿಸಲಾಗಿದೆ.
ನಾಲ್ಕನೆಯ ಬಾರಿಗೆ ವಿಚಾರಣೆಗೆ ಕರೆದಾಗ ಇತರ ಆರೋಪಿಗಳ ಹೇಳಿಕೆ ಆಧರಿಸಿ ಅಮೃತ್ ಪೌಲ್‌ರನ್ನು ಬಂಧಿಸಿದರು. ಪಂಜಾಬ್ ಮೂಲದ ಪೌಲ್ 1995ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದು ಉಡುಪಿ ಮೊದಲಾದ ಕಡೆ ಸೇವೆ ಸಲ್ಲಿಸಿದ್ದರು.
1ನೇ ಎಸಿಎಂಎಂ ನ್ಯಾಯಾಲಯವು ಪೌಲ್‌ರಿಗೆ 10 ದಿನಗಳ ಪೋಲೀಸು ಕಸ್ಟಡಿ ವಿಧಿಸಿತು.