ಮಧ್ಯ ಪ್ರದೇಶದ ದೆವಾಸ್ ಜಿಲ್ಲೆಯ ಬೋರ್ಪದವು ಗ್ರಾಮದಲ್ಲಿ ಬುಡಕಟ್ಟು ಮಹಿಳೆಯೊಬ್ಬಳಿಗೆ ಚಪ್ಪಲಿ ಮಾಲೆ ಹಾಕಿ, ಗಂಡನನ್ನು ಹೊರುವಂತೆ ಮಾಡಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ಬಂಧಿಸಲಾಗಿದೆ.
ಮಹಿಳೆಯು ಮೂರು ದಿನ ಮನೆ ಬಿಟ್ಟು ಹೋಗಿದ್ದಳು. ಬಂದಾಗ ಊರವರು ಸೇರಿ, ಅಕ್ರಮ ಸಂಬಂಧದ ಆರೋಪ ಹೊರಿಸಿದ್ದಾರೆ. ಹೊಡೆದು ಹಿಂಸಿಸಿದ್ದಾರೆ.
ಈ ವೀಡಿಯೋ ಜಾಲ ತಾಣಗಳಲ್ಲಿ ಹರಿದಾಡುತ್ತಲೇ ಪೋಲೀಸರು ಎಚ್ಚೆತ್ತು ಒಂಬತ್ತು ಜನರನ್ನು ಬಂಧಿಸಿ ಮೊಕದ್ದಮೆ ದಾಖಲಿಸಿದ್ದಾರೆ.