ಮೂಲತಃ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಯವರಾಗಿರುವ, ಇದೀಗ ಹಾಸನ ಜಿಲ್ಲೆಯ ಗೊರೂರು ಎಂಬಲ್ಲಿ ಉಧ್ಯಮ ದಲ್ಲಿರುವ ಕವಯಿತ್ರಿ ರೇಷ್ಮಾ ಶೆಟ್ಟಿ- ಗೊರೂರು ಎಂಬವರ ಎರಡನೇ ಸಂಕಲನ "ನೀನಾನಾನಾ" ಎಂಬ ಸ್ವ ರಚಿತ ಕವನ ಸಂಕಲನವು ಕನಕಶ್ರೀ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆ ಯಾಗಿದೆ.
ಪ್ರತಿಷ್ಟಿತ ಸಂಸ್ಥೆಯಾಗಿರುವ ಕನಕಶ್ರೀ ಪ್ರಕಾಶನ- ಬ್ಯಾಕೋಡ, ದಾರವಾಡ ಇವರು ರೇಷ್ಮಾ ಶೆಟ್ಟಿ- ಗೊರೂರು ರವರ ಕವನ ಸಂಕಲನ ವನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದು ಕಳೆದ ಮೇ-29 ರಂದು ದಾರವಾಡ ದಲ್ಲಿರುವ ರಂಗಾಯಣ ಸಭಾಂಗಣ ದಲ್ಲಿ ನಡೆದ ಅಖಿಲ ಕರ್ನಾಟಕ ಕವಿ ಸಮ್ಮೇಳನ ದಲ್ಲಿ ಅನೇಕ ಪ್ರತಿಭಾವಂತರ ಉಪಸ್ಥಿತಿ ಯಲ್ಲಿ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ರೂವಾರಿ, ಸಾಹಿತಿ ಶೇಖರ ಅಜೆಕಾರು ರವರ ಅಧ್ಯಕ್ಷತೆ ಯಲ್ಲಿ ಪುರಸ್ಕಾರ ವನ್ನು ನೀಡಲಾಯಿತು.
ಕವಯಿತ್ರಿ ರೇಷ್ಮಾ ಶೆಟ್ಟಿ -ಗೊರೂರು ರವರು ಉತ್ತಮ ಬರಹಗಾರ್ತಿ ಯಾಗಿ, ಕವಿಯಾಗಿ, ಯುವ ಸಾಹಿತಿಯಾಗಿ, ಉತ್ತಮ ಕಾರ್ಯಕ್ರಮ ನಿರೂಪಕಿ ಯಾಗಿದ್ದು ಅನೇಕ ಸಂಘ- ಸಂಸ್ಥೆ ಗಳಲ್ಲಿ ಕಾಣಿಸಿಕೊಳ್ಳುತ್ತಿರುವವರು. ಇವರ ಹಲವಾರು ಕವಿತೆ ಗಳು, ಲೇಕನ ಗಳು ಹಲವು ಪತ್ರಿಕೆ ಯಲ್ಲಿ ಮುದ್ರಣವಾಗಿದೆ. ಪ್ರತಿಷ್ಠಿತ ಪತ್ರಿಕೆಯಾದ ಜನಮಿಡಿತ ಪತ್ರಿಕೆಯ ವರಧಿ ಗಾರರಾಗಿಯೂ ಇವರು ದುಡಿಯುತ್ತಿರುವವರು.
ರೇಷ್ಮಾ ಶೆಟ್ಟಿ ಯವರ ಸಾಹಿತ್ಯ ರಚನಾ ಆಸಕ್ತಿ ಗೆ ಕನಕಶ್ರೀ ಸಾಹಿತ್ಯ ಪರಸ್ಕಾರವು ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗಿದೆ.