ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ಸ್ಥಳೀಯ ಆಳ್ವಾಸ್ ಶಿಕ್ಷಣ ಸಂಸ್ಥೆಯವರು ನಡೆಸುತ್ತಿರುವ ಒಂದು ವಾರ ಕಾಲದ ಆಳ್ವಾಸ್ ವಿರಾಸತ್ ಸಂದರ್ಭದಲ್ಲಿ ಪುತ್ತೂರು ಅಂಚೆ ವಿಭಾಗವು ವಿಶೇಷವಾದ ಅಂಚೆ ಲಕೋಟೆಯನ್ನು ಡಿಸೆಂಬರ ಹತ್ತರಂದು ಬಿಡುಗಡೆ ಮಾಡಿತು. ಮಂಗಳೂರು ಹಿರಿಯ ಅಂಚೆ ಅಧೀಕ್ಷಕ ಸುಧಾಕರ ಮಲ್ಯ ಲಕೋಟೆಯನ್ನು ಅಂಚೆ ಕಚೇರಿಯ ಮಳಿಗೆಯಲ್ಲಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಜ್ಞಾನ ಜಾತ್ರೆ, ಜ್ಞಾನ ಯಾತ್ರೆಯ ಸಾಂಸ್ಕೃತಿಕ ಆಳ್ವಾಸ್ ಉತ್ಸವದಲ್ಲಿ ಸವಿ ನೆನಪಿಗಾಗಿ ಬಿಡುಗಡೆಯಾಗುತ್ತಿರುವ ವಿಶೇಷ ಅಂಚೆ ಲಕೋಟೆ ಸದಾಕಾಲಕ್ಕು ಐತಿಹಾಸಿಕ ದಾಖಲೆಯಾಗಿ ಉಳಿಯಲಿದೆ ಎಂದರು. 

ವೇದಿಕೆಯಲ್ಲಿ ಮೂಡುಬಿದರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಸ್ಕೌಟ್ ಗೈಡ್ಸ್ ನ ರಾಜ್ಯ ಸಂಚಾಲಕ ಪಿ ಜಿ ಆರ್ ಸಿಂಧ್ಯಾ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಕಾಲೇಜಿನ ಪ್ರಾಂಶುಪಾಲ ಪ್ರೊ. ಕುರಿಯನ್, ಬಂಟ್ವಾಳ ಸಹಾಯಕ ಅಂಚೆ ಅಧೀಕ್ಷ ಕ ಪ್ರಹ್ಲಾದ್ ನಾಯಕ್, ಕಾರ್ಕಳ ಸಹಾಯಕ ಅಂಚೆ ಅಧೀಕ್ಷ ಕ ಮೋಹನ್ ಹಾಗೂ ಇತರರು ಹಾಜರಿದ್ದರು