ನಿಮ್ಮಲ್ಲಿ ಕನಸು ಕಾಣುವ ಸಾಮರ್ಥ್ಯವಿದೆ. ಎಂದಾದರೆ ಏನನ್ನಾದರೂ ಸಾಧಿಸುವ ಸಾಮರ್ಥ, ನಿಮ್ಮಲ್ಲಿದೆ ಎಂದರ್ಥ ಇತರರ ಸಾಧನೆಗೆ ನೀವು ನೆರವು ನೀಡಿದ್ದೀರಿ ಎಂದಾದರೆ ನಿಮ್ಮ ಜೀವನದಲ್ಲಿ ನೀವು ಬಯಸಿದ್ದನ್ನು ಪಡೆಯಲು ಶಕ್ತರಿದ್ದೀರಿ ಎಂದರ್ಥ. ಕುಮಾರ್ ಪೆರ್ನಾಜಿ ಅವರ ನಿರ್ದೇಶನದಲ್ಲಿ ಗ್ರಾಮೀಣ ಪ್ರತಿಭೆಗಳ ವೈವಿಧ್ಯಮಯ ಕಲಾಪ್ರಕಾರವನ್ನು ಪ್ರದರ್ಶಿಸುವ ಸಿಂಚನ ಕಲಾ ತಂಡದಲ್ಲಿ ಸಿಂಚನ ಲಕ್ಕಿ ಕೊಡಂದೂರು ಓದು, ಸಂಗೀತ, ನೃತ್ಯಗಳ ಬಹುಮುಖ ಪ್ರತಿಭೆ, ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ  ವಿದ್ಯಾರ್ಥಿನಿ ಭರತನಾಟ್ಯದಲ್ಲಿ ಉನ್ನತ ಶ್ರೇಣಿಯಲ್ಲಿ ಜೂನಿಯರ್ ಸೀನಿಯರ್ ಆಗಿದ್ದು ಸಂಗೀತದಲ್ಲೂ ಜೂನಿಯರ್ ನಲ್ಲಿ ಉನ್ನತ ಶ್ರೇಣಿಯನ್ನು ಗಳಿಸಿದ್ದು ಸೀನಿಯರ್ ಪರೀಕ್ಷೆಯ ಸಿದ್ಧತೆಯಲ್ಲಿದ್ದು ನೃತ್ಯ ಹಾಡು ಕಲೆಯನ್ನು ಉಣಿಸುವ ಇವಳು ರಘುರಾಮ್ ಶಾಸ್ತ್ರಿ ಕೋಡಂದೂರು ಮತ್ತು ಸವಿತಾ ಕೋಡಂದೂರು,  ಸ್ವರ ಸಿಂಚನ ಕಲಾ ಶಿಕ್ಷಕಿಯ ಪುತ್ರಿ. 

ಇವರ ಅಭಿರುಚಿಯನ್ನು ಮಕ್ಕಳಲ್ಲಿ ಮೂಡಿಸುವ ಪ್ರಯತ್ನದಲ್ಲಿ ಸ್ವರ ಸಿಂಚನ ಸಂಸ್ಥೆ ಅವಿರತ ಶ್ರಮಿಸುತ್ತದೆ ವೈವಿಧ್ಯಮಯ ಕಾರ್ಯಕ್ರಮಗಳಾದ ಶಾಸ್ತ್ರೀಯ ಸಂಗೀತ, ಗಾಯನ, ಗಾನವೈಭವ, ಸಪ್ತಮಾತೃಕೆಯರ ಗೀತಗಾಯನ, ನಗೆಹಬ್ಬ ಅದರ ಜೊತೆ ಜನಪದ ಗೀತೆಗಳನ್ನು ಸ್ಥಳೀಯರಿಂದ ವೇದಿಕೆಯಲ್ಲಿ ಹಾಡಿಸಿ ಸಹೃದಯ ಶೋತ್ರುಗಳನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿದೆ ತಾನು ಬೆಳೆಯುವ ಜೊತೆ ಇತರರನ್ನು ಬೆಳೆಸುತ್ತಿರುವ ವಿಶೇಷ ಕಲಾತಂಡ ಇದಾಗಿದೆ. 

ತಾಳಮೇಳವೇ ಮೈನವಿರೇಳಿಸುತ್ತದೆ. ವಿಶಿಷ್ಟ ಪರಿಕಲ್ಪನೆಯಲ್ಲಿ ಐದು ವರ್ಷಗಳಿಂದ ಪ್ರಗತಿಪರ ರೈತರಾದ ಸತೀಶ್ ರೈ ಕರ್ನೂರು ಪ್ರಾಯೋಜಕತ್ವದಲ್ಲಿ ಈಶ್ವರಮಂಗಲ ಜಾತ್ರೆಯಲ್ಲಿ ವೈವಿಧ್ಯಮಯ ಗಾನ ವೈಭವ, ನಗೆ ಹಬ್ಬ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಮತ್ತು ಎಲ್ಲರ ಮೆಚ್ಚುಗೆ ಗಳಿಸಿತು ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ  ಸುಬ್ರಮಣ್ಯ ದೇವಸ್ಥಾನದಲ್ಲಿ ಕೋಟೆ ದೇವಸ್ಥಾನ, ಐವರ್ನಾಡು, ಕಾವು, ಅಡೂರು, ಕನಕಮಜಲು, ಜಾಲ್ಲೂ‌ ಹೀಗೆ ಎಲ್ಲೆಡೆ ಕಲಾತಂಡ ಪ್ರಸರಿಸಿದೆ ಅದೇ ಪೆರ್ನಾಜೆಯವರ ವಿಶೇಷವಾಗಿದ್ದು ಅರಳುವ ಹೂವುಗಳೇ ಆಲಿಸಿರಿ ಬಾಳೊಂದು ಹೋರಾಟ ಮರೆಯದಿರಿ ಪೆರ್ನಾಜೆ ಪ್ರಶಸ್ತಿ, ಗಡಿನಾಡ ಧ್ವನಿ ಪ್ರಶಸ್ತಿ, ಅಲ್ಲದೆ ಹಲವಾರು ಕಡ ಸನ್ಮಾನಗಳನ್ನು ಪಡೆದಿದ್ದ ಪ್ರತಿಭೆ ಇನ್ನಷ್ಟು ಎತ್ತರಕ್ಕೆ ಬರಲೆಂಬುದೇ ಎಲ್ಲರ ಆಶಯ.

ಬರಹ- ಸೌಮ್ಯ ಪೆರ್ನಾಜೆ