ಕರ್ನಾಟಕದಲ್ಲಿ ಜನರು ಹತ್ತು ರೂಪಾಯಿ ನಾಣ್ಯ ಬಳಸದ ಕಾರಣ ಅವು ಬ್ಯಾಂಕುಗಳಲ್ಲಿ ಮೂಟೆ ಬಿದ್ದಿದ್ದು, ಹೊಸ ಹತ್ತು ರೂಪಾಯಿ ನೋಟುಗಳನ್ನು ಈ ಕಾರಣಕ್ಕೆ ರಿಸರ್ವ್ ಬ್ಯಾಂಕ್ ಒದಗಿಸುತ್ತಿಲ್ಲ ಎಂದು ತಿಳಿದು ಬಂದಿದೆ.

ತುಳುನಾಡಿನಲ್ಲೂ ಇದೇ ಸಮಸ್ಯೆ ಇದೆ. ಇತರ ರಾಜ್ಯಗಳಲ್ಲಿ ನಾಣ್ಯ ಚಲಾವಣೆ ಆಗುವುದರಿಂದ ಹೊಸ ನೋಟು ಸಹ ಬಿಡುಗಡೆ ಆಗುತ್ತಿದೆ. ಕರ್ನಾಟಕದಲ್ಲಿ ಜನರು ಈಗಲೂ ಹತ್ತು ರೂಪಾಯಿ ನಾಣ್ಯ ಪಡೆಯಲು ಹಿಂದೇಟು ಹಾಕುತ್ತಿರುವುದು ಮಾತ್ರ ತಪ್ಪಿಲ್ಲ.